ಐಬಿ ನಿರ್ದೇಶಕರ ಮನೆ ಕಾವಲಿಗಿದ್ದ ಕೇಂದ್ರ ಮೀಸಲು ಪಡೆಯ ASI ಗುಂಡು ಹಾರಿಸಿಕೊಂಡು ಆತ್ಮಹತ್ಯೆ

Prasthutha|

ನವದೆಹಲಿ: ಕೇಂದ್ರ ಮೀಸಲು ಪೊಲೀಸ್ ಪಡೆಯ ಅಸಿಸ್ಟಂಟ್ ಸಬ್ ಇನ್ಸ್ಟೆಕ್ಟರ್ ಒಬ್ಬರು ತಮ್ಮ ರೈಫಲ್ ನಿಂದ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

- Advertisement -


ಮೃತ ಕಾನ್ ಸ್ಟೇಬಲ್ ಅನ್ನು ರಾಜಬೀರ್ ಸಿಂಗ್ (53) ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ರಾಜಬೀರ್ ಸಿಂಗ್ ಅವರನ್ನು ಕೇಂದ್ರ ಗುಪ್ತಚರದಳದ ನಿರ್ದೇಶಕರ ಮನೆ ಕಾವಲಿಗೆ ನಿಯೋಜಿಸಲಾಗಿತ್ತು.
ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆತ್ಮಹತ್ಯೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

Join Whatsapp