ಇನ್ನು ಸರ್ವ ಉದ್ದೇಶಗಳಿಗೆ ಜನನ ಪ್ರಮಾಣ ಪತ್ರವೊಂದೇ ಸಾಕು!

Prasthutha|

ಹೊಸದಿಲ್ಲಿ: ಶಾಲಾ ಕಾಲೇಜುಗಳಿಗೆ ಸೇರಲು, ವಾಹನ ಚಾಲನೆ ಪರವಾನಿಗೆ ಪಡೆಯಲು ಹಾಗೂ  ಸರಕಾರಿ ಹುದ್ದೆಗಳಿಗೆ ಸೇರ್ಪಡೆಯಾಗುವಾಗ ಇನ್ನು ಮುಂದೆ ಕೇವಲ ಜನನ ಪ್ರಮಾಣ ಪತ್ರವೊಂದನ್ನೇ ದಾಖಲೆಯಾಗಿ ಸಲ್ಲಿಸಿದರೆ ಸಾಕು!

- Advertisement -

ಕೇಂದ್ರ ಸರಕಾರ ಜನನ ಮತ್ತು ಮರಣ ನೋಂದಣಿ ಕಾಯ್ದೆ 1969ಕ್ಕೆ ತಿದ್ದುಪಡಿ ತರಲು ಮುಂದಾಗಿದ್ದು, ಬುಧವಾರ ಈ ಸಂಬಂಧ ತಿದ್ದುಪಡಿ ಮಸೂದೆಯನ್ನು ಮಂಡಿಸಿದೆ. ಇದರ ಪ್ರಕಾರ, ಮತದಾರರ ಪಟ್ಟಿಗೆ ಹೆಸರು ಸೇರಿಸಲು, ಆಧಾರ್‌ ಸಂಖ್ಯೆ ನೋಂದಣಿ, ವಿವಾಹ ನೋಂದಣಿಗೂ ಜನನ ದಾಖಲೆ ಪ್ರಮಾಣ ಪತ್ರವೊಂದೇ ಸಾಕು ಎಂಬ ಪ್ರಸ್ತಾವನೆಗಳನ್ನು ಸೇರಿಸಲಾಗಿದೆ.

ಮಸೂದೆಯನ್ನು ಮಂಡಿಸಿ ಮಾತನಾಡಿದ ಸಚಿವ ನಿತ್ಯಾನಂದ ರಾಯ್‌, ಸಾಮಾಜಿಕ ಬದಲಾವಣೆ, ಜನಸ್ನೇಹಿ ನಿಯಮ ಮತ್ತು ತಂತ್ರಜ್ಞಾನದ ಅಳವಡಿಕೆಯ ಕಾರಣದಿಂದಾಗಿ ಈ ಬದಲಾವಣೆ ತರಲಾಗುತ್ತಿದೆ. ಈ ಬಗ್ಗೆ ಎಲ್ಲ ರಾಜ್ಯಗಳು ಮತ್ತು ಭಾಗೀದಾರರ ಜತೆ ಚರ್ಚಿಸುವುದಾಗಿ ತಿಳಿಸಿದ್ದಾರೆ. ಆದರೆ ವಿಪಕ್ಷಗಳು ಇದನ್ನು ವಿರೋಧಿಸಿದ್ದು, ಖಾಸಗಿತನಕ್ಕೆ ಧಕ್ಕೆಯಾಗಬಹುದು ಎಂಬ ಆತಂಕ ವ್ಯಕ್ತಪಡಿಸಿವೆ.

Join Whatsapp