ತಿರುವನಂತಪುರಂ: ಮಲಯಾಳಂ ನ್ಯೂಸ್ ಚಾನೆಲ್ ‘ಮೀಡಿಯಾ ಒನ್’ ಪ್ರಸಾರವನ್ನು ಮತ್ತೆ ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಸುರಕ್ಷತೆಯ ಕಾರಣ ಮುಂದಿಟ್ಟು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಈ ನಿರ್ಬಂಧ ಹೇರಿದೆ ಎಂದು ಚಾನೆಲ್ ಮುಖ್ಯಸ್ಥರು ಆರೋಪಿಸಿದ್ದಾರೆ.
ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಚಾನೆಲ್ ಹೇಳಿದೆ.
ಈ ಹಿಂದೆ ಪ್ರಸಾರಕ್ಕೆ ತಡೆ ನೀಡಲಾಗಿದ್ದರೂ ಬಳಿಕ ಅದನ್ನು ತೆರವುಗೊಳಿಸಲಾಗಿತ್ತು. ಇದೀಗ ಮತ್ತೊಮ್ಮೆ ಕೇಂದ್ರ ಸರಕಾರ ಪ್ರಸಾರಕ್ಕೆ ತಡೆ ನೀಡಿದ್ದು ವೀಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುರಕ್ಷತೆಯ ಕಾರಣವನ್ನು ಉಲ್ಲೇಖಿಸಿ ಕೇಂದ್ರ ವಾರ್ತಾ ಇಲಾಖೆಯು ಪ್ರಸಾರಕ್ಕೆ ತಡೆ ನೀಡಿದ್ದು, ಯಾವುದೇ ಸಮರ್ಪಕ ಕಾರಣಗಳನ್ನು ನಮ್ಮ ಮುಂದಿಟ್ಟಿಲ್ಲ ಎಂದು ಮೀಡಿಯಾ ಒನ್ ಸಂಪಾದಕ ಪ್ರಮೋದ್ ರಾಮನ್ ತಿಳಿಸಿದ್ದಾರೆ.