ಅಂತರಾಷ್ಟ್ರೀಯ ಮಟ್ಟದಲ್ಲಿ ಇಮೇಜ್ ಉಳಿಸಲು, ಅಂತರಾಷ್ಟ್ರೀಯ ಚಾನಲ್ ಆರಂಭಿಸಲು ಕೇಂದ್ರ ಸರಕಾರದಿಂದ ನಿರ್ಧಾರ

Prasthutha|

ಹೊಸದಿಲ್ಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ತಮ್ಮ ವಿಚಾರಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತಲುಪಿಸುವ ನಿಟ್ಟಿನಲ್ಲಿ ಬಿಬಿಸಿ ಚಾನಲ್ ರೀತಿಯಲ್ಲಿ ಟಿವಿ ಚಾನೆಲ್ ಆರಂಭಿಸಲು ಯೋಜನೆಯನ್ನು ರೂಪಿಸುತ್ತಿದೆ. ಮೋದಿ ಸರಕಾರದ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಕೊರೋನ ಪ್ರತಿರೋಧ ಸಹಿತ ವಿವಿಧ ವಿಷಯಗಳಲ್ಲಿ ಕಟು ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ತನ್ನ ವರ್ಚಸ್ಸನ್ನು ಹೆಚ್ಚಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಚಾನಲ್ ಆರಂಭಿಸುವ ಯೋಜನೆ ಸಿದ್ಧವಾಗುತ್ತಿದೆ.

- Advertisement -

ಇದೇ ವೇಳೆ ಇದು ತಕ್ಷಣದ ನಿರ್ಧಾರವಲ್ಲ, ಹಿಂದಿನಿಂದಲೂ ಈ ವಿಷಯ ಪರಿಗಣೆಯಲ್ಲಿತ್ತು ಎಂದು ಪ್ರಸಾರ ಭಾರತಿ ಹೇಳಿದೆ.ಡಿಡಿ ಇಂಟರ್‌ ನ್ಯಾಶನಲ್ ಚ್ಯಾನೆಲ್ನಣ ವಿವರವಾದ ಯೋಜನೆಯ ರೂಪುರೇಷೆಯನ್ನು ಸಲ್ಲಿಸಲು ಆಸಕ್ತರಿಂದ ಪತ್ರವನ್ನು ಕಳೆದ 13ನೇ ತಾರೀಖಿಗೆ ಹೊರಡಿಸಿತ್ತು. ದೂರದರ್ಶನ ಜಾಗತಿಕ ಮಟ್ಟದಲ್ಲಿ ತರಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಧ್ವನಿಯೆತ್ತುವ ಉದ್ದೇಶ ಇದರಲ್ಲಿದೆ ಎಂದು ಹೇಳಲಾಗುತ್ತಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಕೆಲಸ ಮಾಡಿ ಅನುಭವಿರುವ ಸಲಹೆಗಾರರನ್ನು ಚಾನೆಲ್ ಯೋಜನೆಯ ರೂಪು ರೇಷೆ ಸಲ್ಲಿಸಲು ಆಹ್ವಾನಿಸಲಾಗಿದೆ.ಅಂತಾರಾಷ್ಟ್ರೀಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಾಮುಖ್ಯ ಹೊಂದಿದ ವಿಷಯಗಳಲ್ಲಿ ಭಾರತದ ನಿಲುವನ್ನು ಜಗತ್ತಿಗೆ ತಿಳಿಸುವುದು ಚಾನೆಲ್ ಮೂಲಕ ಉದ್ದೇಶಿಸಲಾಗಿದೆ. ಭಾರತದ ಕುರಿತು ಜಾಗತಿಕ ವೀಕ್ಷಕರಿಗೆ ತಿಳಿಸುವುದು ಕೂಡ ಉದ್ದೇಶವಾಗಿದೆ. ಜಗತ್ತಿನ ವಿವಿಧ ಕಡೆಗಳಲ್ಲಿ ಬ್ಯೂರೊಗಳನ್ನು ಆರಂಭಿಸುವ ಯೋಜನೆಯನ್ನು ಸರಕಾರ ಹಾಕಿಕೊಂಡಿದೆ. ವಿವಿಧ ಕ್ಷೇತ್ರಗಳ ಸೂಕ್ತ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುವುದು ಎಂದು ತಿಳಿದು ಬಂದಿದೆ.

Join Whatsapp