ಭಾರತದಲ್ಲಿ ಡ್ರೋಣ್ ಗಳ ನಿಯಮ ಪರಿಷ್ಕರಣೆ | ಕೇಂದ್ರ ಸರಕಾರ

Prasthutha|

ನವದೆಹಲಿ : ದೇಶದಲ್ಲಿ ಡ್ರೋಣ್ ಉದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಿಯಮಗಳಲ್ಲಿ ಸಾಕಷ್ಟು ಸರಳೀಕರಣ ಮಾಡಲಾಗಿದ್ದು, ಇನ್ನು ಮುಂದೆ ಐದು ಅರ್ಜಿ ನಮೂನೆಗಳು ಹಾಗೂ ನಾಲ್ಕು ರೀತಿಯ ಶುಲ್ಕವನ್ನು ವಿಧಿಸಲಾಗಿದೆ. ಡ್ರೋಣ್ ನಿಯಮಾವಳಿ 2021ರನ್ನು ಕೇಂದ್ರ ಸರ್ಕಾರದ ನಾಗರೀಕ ವಿಮಾನಯಾನ ಸಚಿವಾಲಯ ಪರಿಷ್ಕರಣೆ ಮಾಡಿ, ಮೊದಲಿನ ನಿಯಮಗಳನ್ನು ಸರಳೀಕರಿಸಿದೆ.

ದೇಶದ ಒಳಗೆ ಡ್ರೋಣ್ ಬಳಕೆ ಮಾಡಲು ಈ ಮೊದಲು 25 ಅರ್ಜಿ ನಮೂನೆಯಲ್ಲಿ ಮಾಹಿತಿ ನೀಡಬೇಕಿತ್ತು, ಅದನ್ನು ಐದಕ್ಕೆ ಇಳಿಸಲಾಗಿದೆ. ಸುಮಾರು 74 ಮಾದರಿಯ ದಂಡಗಳನ್ನು ನಾಲ್ಕಕ್ಕೆ ಇಳಿಸಲಾಗಿದೆ. ಡ್ರೋಣ್ ನಿಯಮಾವಳಿಗಳು ಈ ವರ್ಷದ ಮಾ.12ರಿಂದ ಜಾರಿಗೆ ಬಂದಿವೆ. ಡ್ರೋಣ್ಗಲಳ ಗಾತ್ರದ ಮೇಲೆ ಶುಲ್ಕವನ್ನು ನಿಗದಿ ಮಾಡಲಾಗಿದೆ.

- Advertisement -

ಹಸಿರು ವಲಯದಲ್ಲಿ 400 ಅಡಿವರೆಗೂ ಡ್ರೋಣ್ ಹಾರಾಟಕ್ಕೆ ಯಾವುದೇ ಅನುಮತಿ ಬೇಕಿಲ್ಲ. ವಿಮಾನನಿಲ್ದಾಣದಿಂದ 8ರಿಂದ 12 ಕಿಲೋ ಮೀಟರ್ ಅಂತರದಲ್ಲಿ 200 ಅಡಿ ಎತ್ತರದವರೆಗೂ ಡ್ರೋಣ್ ಹಾರಾಟಕ್ಕೆ ಅವಕಾಶ ನೀಡಲಾಗಿದೆ. ದಂಡದ ಪ್ರಮಾಣವನ್ನು ಒಂದು ಲಕ್ಷ ರೂಪಾಯಿ ಒಳಗೆ ಮಿತಿಗೊಳಿಸಲಾಗಿದೆ. ಮೈಕ್ರೋ ಡ್ರೋಣ್ಗಾಳಿಗೆ ಪೈಲೆಟ್ ಲೈಸೆನ್ಸ್ ಕೂಡಬೇಕಿಲ್ಲ ಎಂದು ತಿಳಿಸಲಾಗಿದೆ.

- Advertisement -