ಬಜೆಟ್ | 15 ವರ್ಷ ಹಳೆಯ ವಾಹನಗಳ ಸ್ವಯಂ ಸ್ಕ್ರಾಪಿಂಗ್ ನೀತಿ ಪ್ರಕಟಿಸಿದ ನಿರ್ಮಲಾ ಸೀತಾರಾಮನ್

Prasthutha|

ನವದೆಹಲಿ : ವಾಹನ ಉದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಬಜೆಟ್ ನಲ್ಲಿ ಹಳೆಯ ವಾಹನಗಳನ್ನು ಸ್ಕ್ರಾಪ್ ಮಾಡುವ ಹೊಸ ನೀತಿಯನ್ನು ಘೋಷಿಸಿದ್ದಾರೆ.

- Advertisement -

20 ವರ್ಷದಷ್ಟು ಹಳೆದ ಖಾಸಗಿ ವಾಹನಗಳು ಮತ್ತು 15 ವರ್ಷ ಹಳೆಯ ವಾಣಿಜ್ಯ ವಾಹನಗಳನ್ನು ಸ್ಕ್ರಾಪ್ ಗೆ ಹಾಕುವ ಸಂಬಂಧ ಹೊಸ ಸ್ಕ್ರಾಪೇಜ್ ನೀತಿಯನ್ನು ಅವರು ಪ್ರಕಟಿಸಿದ್ದಾರೆ.

ಈ ವಾಹನ ಸ್ಕ್ರಾಪಿಂಗ್ ನೀತಿಯು ಸ್ವಯಂ ಪ್ರೇರಣೆಯದ್ದಾಗಿರಲಿದ್ದು, 20 ವರ್ಷದ ಖಾಸಗಿ ಮತ್ತು 15 ವರ್ಷದ ವಾಣಿಜ್ಯ ವಾಹನಗಳನ್ನು ಫಿಟ್ನೆಸ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

- Advertisement -

ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ರಾಜ್ಯಗಳಿಗೆ ಪ್ರಮುಖ ರಾಷ್ಟ್ರೀಯ ಹೈವೇ ಯೋಜನೆಗಳನ್ನು ಘೋಷಿಸಲಾಗಿದೆ. ಈ ರಾಜ್ಯಗಳಲ್ಲಿ ಪ್ರಸಕ್ತ ವರ್ಷ ಚುನಾವಣೆ ನಡೆಯಲಿದೆ.

Join Whatsapp