ಕರಾವಳಿ ಸೇರಿದಂತೆ ದೇಶಾದ್ಯಂತ ಸಂಭ್ರಮದ ಕ್ರಿಸ್ಮಸ್ ಆಚರಣೆ
Prasthutha: December 25, 2021

ಮಂಗಳೂರು: ದೇಶಾದ್ಯಂತ ಇಂದು ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಮಂಗಳೂರಿನ ವಿವಿಧ ಚರ್ಚ್ ಗಳಲ್ಲಿ ವಿಶೇಷ ಪಾರ್ಥನೆ ಸಲ್ಲಿಸುವ ಮೂಲಕ ಕ್ರಿಶ್ಚಿಯನ್ನರು ಹಬ್ಬ ಆಚರಿಸಿದರು.
ಯೇಸುವಿನ ಜನನದ ಹಬ್ಬ ಕ್ರಿಸ್ ಮಸ್ ನ್ನು ಇಂದು ಕರಾವಳಿಯಾದ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಹಬ್ಬದ ಪ್ರಯುಕ್ತ ಚರ್ಚ್ ಹಾಗೂ ಕ್ರೈಸರ ಮನೆಗಳಲ್ಲಿ ಹಬ್ಬದ ಸಡಗರದ ವಾತಾವರಣ ನೆಲೆಸಿದೆ.
ಹಬ್ಬದ ವಾತಾವರಣ ಎಲ್ಲೆಡೆ ಮನೆಮಾಡಿದ್ದು, ಚರ್ಚ್‌ಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ.
