ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗಾಗಿ ಸೀಲಿಂಗ್‌ ಫ್ಯಾನ್‌ ತೆರವು !

Prasthutha|

ಬೆಂಗಳೂರು: ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯುವುದಕ್ಕೆ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ ಕಾಲೇಜು ಕೊಠಡಿಗಳ ಸೀಲಿಂಗ್‌ ಫ್ಯಾನ್‌ ತೆಗೆದುಹಾಕಲು ಆರಂಭಿಸಿದೆ.

- Advertisement -

ಕಾಲೇಜಿನ ಎಲ್ಲ ಕೊಠಡಿಗಳ ಸೀಲಿಂಗ್‌ ಫ್ಯಾನ್‌ ತೆಗೆದುಹಾಕಿ, ಗೋಡೆಗೆ ಅಳವಡಿಸುವಂಥ ಫ್ಯಾನ್‌ ಗಳನ್ನು ಹಾಕಲು ಆದೇಶಿಸಿದೆ. ಹಾಗೆಯೇ ಕಾಲೇಜಿನ ಟೆರೇಸ್‌ ಮತ್ತು ಬಾಲ್ಕನಿಗೆ ತೆರಳದಿರುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

ಈ ವರ್ಷ ನಾಲ್ಕು ವಿದ್ಯಾರ್ಥಿಗಳು ಹಾಗೂ ಕಳೆದ ವರ್ಷ ಇಬ್ಬರು ವಿದ್ಯಾರ್ಥಿಗಳು ಐಐಎಸ್‌ಸಿ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಲೇಜು ಸೀಲಿಂಗ್‌ ಫ್ಯಾನ್‌ ತೆರವುಗೊಳಿಸುವ ನಿರ್ಧಾರಕ್ಕೆ ಬಂದಿದೆ.

Join Whatsapp