ಗಾಝಾದಲ್ಲಿ ಕದನ ವಿರಾಮ ಮಾತುಕತೆ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಇಸ್ರೇಲ್‌ಗೆ ಭೇಟಿ

Prasthutha|

ಟೆಲ್‍ ಅವೀವ್: ಗಾಝಾದಲ್ಲಿ ಕದನ ವಿರಾಮ ಒಪ್ಪಂದವನ್ನು ಅಂತಿಮಗೊಳಿಸಲು ಅಮೆರಿಕದ ಪ್ರಯತ್ನ ಮುಂದುವರಿದಿದ್ದು, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ರವಿವಾರ ಇಸ್ರೇಲ್‍ಗೆ ತೆರಳಿದ್ದಾರೆ.

- Advertisement -

40,000ಕ್ಕೂ ಅಧಿಕ ಪ್ಯಾಲೆಸ್ತೀನೀಯರ ಸಾವಿಗೆ ಕಾರಣವಾಗಿರುವ ಯುದ್ಧವನ್ನು ನಿಲ್ಲಿಸಲು ಇಸ್ರೇಲ್‌ಗೂ ಒತ್ತಡ ಹೆಚ್ಚಾಗುತ್ತಿದ್ದು, ಈ ಮಧ್ಯೆ ಹಮಾಸ್ ಮತ್ತು ಇಸ್ರೇಲ್ ಎರಡಕ್ಕೂ ಸಮ್ಮತಿಯಾಗುವ ರೀತಿಯ ಕದನ ವಿರಾಮ ಪ್ರಸ್ತಾವನೆಯನ್ನು ಅಮೆರಿಕ ಖತರ್ ಮತ್ತು ಈಜಿಪ್ಟ್ ಎದುರು ಮಂಡಿಸಿದೆ. ವಿಸ್ತೃತ ಚರ್ಚೆ ನಡೆಸಿದೆ.

ಬ್ಲಿಂಕೆನ್ ಇಸ್ರೇಲ್ ಜತೆ ಮಾತುಕತೆ ನಡೆಸಲು ಟೆಲ್‍ಅವೀವ್‍ಗೆ ತೆರಳಿದ್ದು, ಕದನ ವಿರಾಮ ಮಾತುಕತೆ ಮುಂದಿನ ವಾರ ಈಜಿಪ್ಟ್ ನ ಕೈರೋದಲ್ಲಿ ಮುಂದುವರಿಯುವ ಸಾಧ್ಯತೆ ಇದೆ.

- Advertisement -

ಈ ಬೆಳವಣಿಗೆಯ ಮಧ್ಯಯೇ ಪಶ್ಚಿಮ ದಂಡೆಯ ಜೆನಿನ್ ನಗರದಲ್ಲಿ ದಾಳಿಯಲ್ಲಿ ಹಮಾಸ್‍ನ ಇಬ್ಬರು ಇಸ್ರೇಲ್‍ ದಾಳಿ ನಡೆಸಿದ್ದು, ಹಮಾಸ್‍ ನ ಇಬ್ಬರು ಸಶಸ್ತ್ರ ಹೋರಾಟಗಾರರು ಮೃತಪಟ್ಟಿದ್ದಾರೆ.

ಮೃತರು ಕಳೆದ ವಾರ ಪಶ್ಚಿಮದಂಡೆಯ ಜೋರ್ಡಾನ್ ಕಣಿವೆಯಲ್ಲಿ ಇಸ್ರೇಲಿ ಪ್ರಜೆಯೊಬ್ಬನ ಹತ್ಯೆಯ ಸಂಚು ರೂಪಿಸಿದ್ದರು ಎಂದು ಇಸ್ರೇಲ್ ಭದ್ರತಾ ಪಡೆ ಹೇಳಿದೆ.



Join Whatsapp