ಹೊಸದಿಲ್ಲಿ: ಪ್ರಶ್ನೆ ಪತ್ರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್ ಮತ್ತು ಸಮಾಜಶಾಸ್ತ್ರದ ತಜ್ಞರಿಬ್ಬರನ್ನು CBSE ಪ್ರಶ್ನೆಪತ್ರಿಕೆ ಸಮಿತಿಯಿಂದ ಹೊರಹಾಕಲಾಗಿದೆ.
CBSE ನಿಯಮಗಳಿಗೆ ವಿರುದ್ಧವಾಗಿ ಪ್ರಶ್ನೆಗಳನ್ನು ಸಿದ್ಧಪಡಿಸಿರುವ ಹಿನ್ನೆಲೆಯಲ್ಲಿ ಇಬ್ಬರನ್ನು ಉಚ್ಚಾಟಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಶ್ನೆ ಪತ್ರಿಕೆಯಲ್ಲಿ ಮಹಿಳಾ ವಿರೋಧಿ ಉಲ್ಲೇಖ ಮತ್ತು ಗುಜರಾತ್ ಗಲಭೆ ಕುರಿತ ಪ್ರಶ್ನೆಗಳನ್ನು ಸೇರಿಸಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಹನ್ನೆರಡನೇ ತರಗತಿಯ ಸಮಾಜಶಾಸ್ತ್ರ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಗುಜರಾತ್ ಗಲಭೆ ಯಾವ ಸರ್ಕಾರದ ಅವಧಿಯಲ್ಲಿ ನಡೆಯಿತು ಎಂಬ ಪ್ರಶ್ನೆಯನ್ನು ಉಲ್ಲೇಖಿಸಲಾಗಿತ್ತು. 10ನೇ ತರಗತಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ ಮಹಿಳಾ ವಿರೋಧಿ ಉಲ್ಲೇಖವೂ ದೊಡ್ಡ ಚರ್ಚೆಯಾಗಿತ್ತು.
ಪರೀಕ್ಷೆಯ ವಿರುದ್ಧ ದೇಶದಾದ್ಯಂತ ವ್ಯಾಪಕ ಆಕ್ರೋಶಗಳು ಕೇಳಿ ಬಂದಿತ್ತು.