ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಡಿಸಿಎಂ ತೇಜಸ್ವಿ ಯಾದವ್ ಜಾಮೀನು ರದ್ದು ಮಾಡುವಂತೆ ಸಿಬಿಐ ಮನವಿ

Prasthutha|

ನವದೆಹಲಿ: ತನಿಖಾ ಸಂಸ್ಥೆಯ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಜಾಮೀನು ರದ್ದುಗೊಳಿಸುವಂತೆ ಕೋರಿ ಸಿಬಿಐ ಶನಿವಾರ ದೆಹಲಿ ನ್ಯಾಯಾಲಯದ ಮೊರೆ ಹೋಗಿದೆ.

- Advertisement -

ಇತ್ತೀಚಿಗೆ ಪತ್ರಿಕಾಗೋಷ್ಠಿಯಲ್ಲಿ ಯಾದವ್ ಪ್ರಚೋದನಕಾರಿ ಮತ್ತು ಬೆದರಿಕೆಯ ಹೇಳಿಕೆಗಳನ್ನು ನೀಡಿದ್ದರು. ಇದು ಬೆದರಿಕೆ ಎಂದು ಭಾವಿಸಬಹುದು. ಆದ್ದರಿಂದ ಪ್ರಕರಣದ ಫಲಿತಾಂಶದ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ಸಿಬಿಐ ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯಲ್ಲಿ ಆರೋಪಿಸಿದೆ.

ಸಿಬಿಐನ ಮನವಿಯ ಮೇರೆಗೆ ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯಲ್ ಯಾದವ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಈ ವಿಷಯದ ಬಗ್ಗೆ ಅವರ ಪ್ರತಿಕ್ರಿಯೆಯನ್ನು ಕೋರಿದ್ದಾರೆ.

- Advertisement -

ಕಳೆದ ತಿಂಗಳು ತೇಜಸ್ವಿ ಯಾದವ್, ಸಿಬಿಐ ಅಧಿಕಾರಿಗಳಿಗೆ ತಾಯಿ ಮತ್ತು ಮಕ್ಕಳಿಲ್ಲವೇ? ಅವರಿಗೆ ಕುಟುಂಬವಿಲ್ಲವೇ? ಅವರು ಯಾವಾಗಲೂ ಸಿಬಿಐ ಅಧಿಕಾರಿಗಳಾಗಿಯೇ ಇರುತ್ತಾರೆಯೇ? ಅವರು ನಿವೃತ್ತರಾಗುವುದಿಲ್ಲವೇ? ಈ ಪಕ್ಷ ಮಾತ್ರ ಅಧಿಕಾರದಲ್ಲಿ ಉಳಿಯುತ್ತದೆಯೇ? ನೀವು ಯಾವ ಸಂದೇಶವನ್ನು ಕಳುಹಿಸಲು ಬಯಸುತ್ತೀರಿ? ನೀವು ಸಾಂವಿಧಾನಿಕ ಸಂಸ್ಥೆಯ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕುಎಂದು ಪ್ರತಿಕಾಗೋಷ್ಟಿಯಲ್ಲಿ ಹೇಳಿಕೆ ನೀಡಿದ್ದರು.

Join Whatsapp