ನವದೆಹಲಿ: ಆಮ್ ಆದ್ಮಿ ಪಾರ್ಟಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಸರಿಸುಮಾರು 2 ವರ್ಷಗಳಿಂದ ಜೈಲಿನಲ್ಲಿರುವ ಆಪ್ ನಾಯಕ ಸತ್ಯೇಂದ್ರ ಜೈನ್ ವಿರುದ್ಧ ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಆದೇಶ ನೀಡಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿದ ಸತ್ಯೇಂದ್ರ ಜೈನ್, ತಿಹಾರ್ ಜೈಲಿನಿಂದಲೇ ಡೀಲ್ ಮಾಡಿ ಕೋಟಿ ಕೋಟಿ ರೂಪಾಯಿ ಸುಲಿಗೆ ಮಾಡಿದ್ದಾರೆ ಎಂಬ ಆರೋಪದ ಕುರಿತು ತನಿಖೆಯನ್ನು ಸಿಬಿಐಗೆ ನೀಡಲಾಗಿದೆ.
ಸತ್ಯೇಂದ್ರ ಜೈನ್ ಹಾಗೂ ಮಾಜಿ ಜೈಲಧಿಕಾರಿ ರಾಜ್ ಕುಮಾರ್ ಸೇರಿದಂತೆ ಹಲವರು ವಂಚಕ ಸುಕೇಶ್ ಚಂದ್ರಶೇಖರ್ ಸೇರಿದಂತೆ ಹಲವು ಕೈದಿಗಳೀಗೆ ಕಾರಾಗೃಹದಲ್ಲಿ ಸುಖ-ವೈಭೋಗ ಕಲ್ಪಿಸಲು ಸುಲಿಗೆ ಮಾಡಿದ್ದಾರೆ ಅನ್ನೋ ಗಂಭೀರ ಆರೋಪವಿದೆ.
ವಂಚಕ ಸುಕೇಶ್ ಕೂಡ ಈ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆತನಿಗೆ ಮತ್ತು ಇತರ ಪ್ರಮುಖ ಕೈದಿಗಳಿಗೆ ಜೈಲಿನಲ್ಲಿ ಸುಖ ವೈಭೋಗ ಕಲ್ಪಿಸಲು ಸತ್ಯೇಂದ್ರ ಜೈನ್ ಕಂತುಗಳಲ್ಲಿ 10 ಕೋಟಿ ರೂಪಾಯಿ ಪಡೆದಿದ್ದಾರೆ ಅನ್ನೋ ಆರೋಪ ಇದೆ.