ಟಾಪ್ ಸುದ್ದಿಗಳು

ಲೈಂಗಿಕ ಕಿರುಕುಳ ಆರೋಪ: ಮುರುಘಾ ಮಠದ ಆಡಳಿತಾಧಿಕಾರಿ ವಿರುದ್ಧ FIR ದಾಖಲು

ಚಿತ್ರದುರ್ಗ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಅರೋಪದಡಿ ಮುರುಘಾ ಮಠದ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯ ಬಸವರಾಜನ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಆಡಳಿತಾಧಿಕಾರಿ ಬಸವರಾಜನ್ ಅವರು ಪರಿಶೀಲನೆ ನೆಪದಲ್ಲಿ ಕೊಠಡಿಗೆ...

ಪ್ರಧಾನಿ ಮೋದಿ ಭೇಟಿಗೂ ಮುನ್ನ ಗುಜರಾತ್ ನಲ್ಲಿ ಕೋಮು ಘರ್ಷಣೆ; ಮಸೀದಿಗೆ ದಾಳಿ, ಅಂಗಡಿಗಳ ಲೂಟಿ

ಕಚ್: ವ್ಯಕ್ತಿಯೊಬ್ಬರ ಹತ್ಯೆಯ ಬಳಿಕ ಗುಜರಾತ್ ನ ಕಛ್ ಜಿಲ್ಲೆಯ ಭುಜ್ ಎಂಬಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು, ದುಷ್ಕರ್ಮಿಗಳ ಗುಂಪೊಂದು ಮಸೀದಿಗೆ ದಾಳಿ ನಡೆಸಿ ದಾಂಧಲೆಗೈದು, ಕಿಟಕಿ ಗಾಜುಗಳನ್ನುಧ್ವಂಸಗೊಳಿಸಿದೆ. ಭುಜ್ ಪ್ರದೇಶದ ಮಧಾಪುರ್ ಎಂಬಲ್ಲಿ ಹಲವು ಅಂಗಡಿಗಳಿಗೂ ದಾಳಿ ನಡೆಸಿರುವ ಗುಂಪು, ಅಲ್ಲಿಂದ ಲೂಟಿ ಮಾಡಿದೆ. ಪ್ರಸಕ್ತ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಎರಡೂ ಗುಂಪುಗಳು ನೀಡಿದದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ. ನಾಳೆ ಗುಜರಾತ್ ಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವ ಸಂದರ್ಭದಲ್ಲೇ ಈ ಕೋಮು ಘರ್ಷಣೆ ನಡೆದಿರುವುದುಸರ್ಕಾರಕ್ಕೆ ಮುಜುಗರ ತರಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪರೇಶ್ ರಾಬರಿ ಮತ್ತು ಸುಲೇಮಾನ್ ಸನಾ ಎಂಬವರ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿದೆ. ಈ ವೇಲೆ ಸುಲೈಮಾನ್ಚಾಕು ಇರಿದಿದ್ದು, ಇದರಿಂದ ಪರೇಶ್ ಮೃತಪಟ್ಟಿದ್ದಾರೆ. ಪರೇಶ್ ಅವರ ಅಂತ್ಯಸಂಸ್ಕಾರ ನಡೆಸಿ ಹಿಂದಿರುವಾಗ ಮುಸ್ಲಿಮರಮಸೀದಿ, ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಷ್ಟೇ ಹೇಳಬಲ್ಲೆ ಎಂದು ಕಚ್ ಪಶ್ಚಿಮ ವಲಯದ ಪೊಲೀಸ್ ವರಿಷ್ಠಾಧಿಕಾರಿಸೌರಬ್ ಸಿಂಗ್ ತಿಳಿಸಿದ್ದಾರೆ. https://twitter.com/ZakirAliTyagi/status/1563454817099325440

ಶಿವಮೊಗ್ಗ: ವಿಚಿತ್ರ ಕರುವಿಗೆ ಜನ್ಮ ನೀಡಿದ ಎಮ್ಮೆ

ಸೊರಬ: ಎಮ್ಮೆಯೊಂದು ವಿಚಿತ್ರ ಕರುವಿಗೆ ಜನ್ಮ ನೀಡಿದ ಘಟನೆ ಪುರಸಭೆ ವ್ಯಾಪ್ತಿಯ ಹಳೇಸೊರಬ ಸಮೀಪದ ಗೌರಿಕೆರೆ ಮಠದಲ್ಲಿ ನಡೆದಿದೆ. ಮಹೇಂದ್ರಸ್ವಾಮಿ ಎಂಬವರಿಗೆ ಸೇರಿದ ಎಮ್ಮೆ ಶನಿವಾರ ಮುಂಜಾನೆ ವಿಚಿತ್ರ ಗಂಡು ಕರುವಿಗೆ ಜನ್ಮ ನೀಡಿದ್ದು,...

ಸೆ.9ರಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಸೆ. 9ರಂದು ಚುನಾವಣೆ ನಡೆಯಲಿದೆ. 23ನೇ ಅವಧಿಗೆ ಮೇಯರ್ ಸ್ಥಾನಕ್ಕೆ ಸಾಮಾನ್ಯ, ಉಪ ಮೇಯರ್...

ಸುಳ್ಯ: ಗುಂಡಿ ತೆಗೆಯುವಾಗ ಗುಹೆ, ಪ್ರಾಚೀನ ಪರಿಕರಗಳು ಪತ್ತೆ !

ಸುಳ್ಯ: ಜಮೀನಿನಲ್ಲಿ ಗುಂಡಿ ತೆಗೆಯುವಾಗ ಗುಹೆ ಪತ್ತೆಯಾಗಿ ಅದರಲ್ಲಿ ಪ್ರಾಚೀನ ಕಾಲದ ಮಣ್ಣಿನ ಪರಿಕರಗಳು ಪತ್ತೆಯಾಗಿರುವ ಘಟನೆ ಕಡಬ ತಾಲೂಕಿನ ಎಡಮಂಗಲ ಗ್ರಾಮದಲ್ಲಿ ನಡೆದಿದೆ. ರಬ್ಬರ್ ತೋಟ ತೆರವು ಮಾಡಿ ಅಡಕೆ ತೋಟ ಮಾಡುವ...

ನಸೀಬು ಚೆನ್ನಾಗಿದ್ರೆ ಕರ್ನಾಟಕದ ಮುಖ್ಯಮಂತ್ರಿ ಆಗುವೆ: ಉಮೇಶ್ ಕತ್ತಿ

ಗದಗ: ಉತ್ತರ ಕರ್ನಾಟಕದವರೇ ಸಿಎಂ ಆಗಿರುವಾಗ ನಾನು ಮುಖ್ಯಮಂತ್ರಿ ಪದವಿಗೆ ಆಸೆ ಪಡುವುದಿಲ್ಲ.ಆದರೆ ನನಗೆ ಇನ್ನೂ 15 ವರ್ಷಗಳ ಕಾಲಾವಕಾಶ ಇದೆ. ಅತ್ಯಂತ ಹಿರಿಯ ರಾಜಕಾರಣಿಯಾಗಿರುವುದರಿಂದ ನಸೀಬು ಚೆನ್ನಾಗಿದ್ರೆ ಅಖಂಡ ಕರ್ನಾಟಕದ ಮುಖ್ಯಮಂತ್ರಿ...

ಹವಾಮಾನ ವೈಪರೀತ್ಯ; ಸಂಕಷ್ಟದಲ್ಲಿ ಕಾಳುಮೆಣಸು ಬೆಳೆಗಾರರು

ಸೋಮವಾರಪೇಟೆ : ಹವಾಮಾನ ವೈಪರೀತ್ಯದಿಂದಾಗಿ ಕಾಳುಮೆಣಸಿನ ಫಸಲು ಉದುರಿ ಮಣ್ಣು ಸೇರುತ್ತಿದ್ದು, ನಿರಂತರ ಮಳೆಯಿಂದಾಗಿ ಈ ವರ್ಷವೂ ಬೆಳೆಗಾರರು ನಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ಸಕಾಲಕ್ಕೆ ಮಳೆ ಸುರಿದು ಗಿಡಗಳಲ್ಲಿ ಕಾಳು ಕಟ್ಟಿತ್ತು. ಆದರೆ...

ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವು: ಕ್ಲಬ್ ಮಾಲೀಕ ಸೇರಿ ನಾಲ್ವರ ಬಂಧನ

ಪಣಜಿ: ನಟಿ ಹಾಗೂ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಶಂಕಾಸ್ಪದ ಸಾವು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವಗೋವಾ ಪೊಲೀಸರು ಕರ್ಲಿ ಕ್ಲಬ್ ಮಾಲೀಕನನ್ನು ಬಂಧಿಸಿದ್ದಾರೆ. ಕರ್ಲಿ ಕ್ಲಬ್ ಮಾಲೀಕನ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದ್ದು...
Join Whatsapp