ಅಂತರ್ಜಾತಿ ವಿವಾಹವಾದ ಜೋಡಿಗೆ ಹತ್ತೇ ದಿನದಲ್ಲಿ ಗಿಫ್ಟ್ ಕೊಡುವುದಾಗಿ ಕರೆಸಿಕೊಂಡು ಹತ್ಯೆಗೆ ಯತ್ನಿಸಿದ ಜಾತಿವಾದಿ ಉಗ್ರರು

Prasthutha|

ಹೈದರಾಬಾದ್ : ಅಂತರ್ಜಾತಿ ವಿವಾಹವಾಗಿದ್ದ ನವದಂಪತಿಯ ಮೇಲೆ ಹುಡುಗಿ ಮನೆಯ ಜಾತಿವಾದಿ ಉಗ್ರರು ಭೀಕರ ದಾಳಿ ನಡೆಸಿದ್ದಾರೆ. ತೆಲಂಗಾಣದ ನಲಗೊಂಡ ಜಿಲ್ಲೆಯ ಮಿರಿಯಾಲಗುಡ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

- Advertisement -

24 ವರ್ಷದ ಸಂದೀಪ್ ಮತ್ತು 22 ವರ್ಷದ ಮಾಧವಿ ಬೇರೆ ಬೇರೆ ಜಾತಿಯವರಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಮಾಧವಿಗೆ ತನ್ನ ತಂಗಿ ಮಗನೊಂದಿಗೆ ವಿವಾಹ ಮಾಡಿಸಲು ಆಕೆಯ ತಂದೆ ನಿರ್ಧರಿಸಿದ್ದರು.

ಆದರೆ, ಮಾಧವಿ ಮದುವೆಗೆ ಒಪ್ಪಿರಲಿಲ್ಲ. ಪ್ರಿಯಕರೊನೊಂದಿಗೆ 10 ದಿನಗಳ ಹಿಂದೆ ಆರ್ಯ ಸಮಾಜದಲ್ಲಿ ಮಾಧವಿ ಮದುವೆಯಾಗಿದ್ದಾಳೆ.

- Advertisement -

ಗಿಫ್ಟ್ ಕೊಡುವುದಾಗಿ ಕರೆಸಿಕೊಂಡ ಹುಡುಗಿಯ ತಂದೆ, ಆಕೆ ಮತ್ತು ಆಕೆಯ ಪತಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಇದೀಗ ಇಬ್ಬರೂ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Join Whatsapp