ಮರಕುಂಬಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ 98 ಮಂದಿಗೆ ಜೀವಾವಧಿ ಶಿಕ್ಷೆ; ಜಾತಿ ಗರ್ವದ ಮನುವಾದಿಗಳಿಗೆ ತಕ್ಕ ಪಾಠವಾಗಿದೆ: ಅಬ್ದುಲ್ ಮಜೀದ್

Prasthutha|

ಬೆಂಗಳೂರು: ಕೊಪ್ಪಳ ಜಿಲ್ಲೆಯ ಮರಕುಂಬಿಯಲ್ಲಿ 2014 ರಲ್ಲಿ ಕ್ಷುಲ್ಲಕ ಕಾರಣಕ್ಕೆ ದಲಿತರ ಕೇರಿಗೆ ನುಗ್ಗಿದ ಮೇಲ್ಜಾತಿ ಎಂದು ಕರೆಸಿಕೊಳ್ಳುವ ಜಾತಿ ಗರ್ವದಲ್ಲಿ ಮುಳುಗಿರುವ ರೌಡಿಗಳ ಗುಂಪು ದಲಿತರ ಮೇಲೆ ದೊಡ್ಡ ಹಲ್ಲೆ ಮಾಡಿ ಅವರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದವು. ಆ ಪ್ರಕರಣದಲ್ಲಿ ಅಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 98 ಮಂದಿಗೆ ಜೀವಾವಧಿ ಮತ್ತು ಮೂವರಿಗೆ ಐದು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಈ ತೀರ್ಪು ದೌರ್ಜನ್ಯಕ್ಕೆ ಒಳಗಾಗುವ ಸಮುದಾಯಗಳಲ್ಲಿ ಹೊಸ ಭರವಸೆಯನ್ನು ತುಂಬಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

- Advertisement -

ಮನುಷ್ಯ ಮನುಷ್ಯನ ನಡುವೆ ಬೇಧ ಮಾಡುವ ನೀಚ ಜಾತಿ ಪದ್ಧತಿಯ ಕಾರಣಕ್ಕೆ ಶತಮಾನಗಳಿಂದ ನಿರ್ದಿಷ್ಟ ಸಮುದಾಯಗಳು ಮೂಲಭೂತ ಹಕ್ಕುಗಳ ನಿರಾಕರಣೆ ಜೊತೆಗೆ ಶೋಷಣೆ ಮತ್ತು ಹಿಂಸಾತ್ಮಕ ದೌರ್ಜನ್ಯಕ್ಕೆ ಒಳಗಾಗುತ್ತಲೇ ಇವೆ. ದೇಶದಲ್ಲಿ ಇಂತಹ ಕ್ರೌರ್ಯದ ವಿರುದ್ಧ ಕಠಿಣ ಕಾನೂನುಗಳು ಇದ್ದಾಗ್ಯೂ ಈ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ನಗಣ್ಯವಾಗಿದೆ. ಕರ್ನಾಟಕದಲ್ಲಿ ಶಿಕ್ಷೆಯ ಪ್ರಮಾಣ ಕೇವಲ 7% ಮಾತ್ರ. ಇದರಿಂದ ದಲಿತರು ತಮ್ಮ ಮೇಲಾಗುವ ದೌರ್ಜನ್ಯಗಳಿಗ್ರ ನ್ಯಾಯ ಸಿಗಲಾರದು ಎಂಬ ನಿರಾಶಾದಾಯಕ ಮನಸ್ಥಿತಿಗೆ ಜಾರಿದ್ದರು. ಅದರೆ ಮರಕುಂಬಿ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗಿರುವುದು ಆಶಾದಾಯಕ ಬೆಳವಣಿಗೆ. ಈ ತೀರ್ಪನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಮತ್ತು ತೀರ್ಪು ನೀಡಿದ ನ್ಯಾಯಾಧೀಶರನ್ನು ಅಭಿನಂದಿಸುತ್ತೇನೆ ಎಂದು ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತೀರ್ಪಿನ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.

ಎಲ್ಲ ಅಪರಾಧಿಗಳು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ. ಅಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅದರ ವಿರುದ್ಧ ಬಲವಾದ ಆಕ್ಷೇಪ ದಾಖಲಿಸಿ ಶಿಕ್ಷೆ ಕಾಯಂ ಆಗುವಂತೆ ನೋಡಿಕೊಳ್ಳಬೇಕು ಎಂದ ಮಜೀದ್ ಅವರು, ಮನುವಾದಿ ಮಾಧ್ಯಮಗಳು ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳ ಕುಟುಂಬಗಳು ರೋಧಿಸುತ್ತಿವೆ ಎಂದು ಭಾವನಾತ್ಮಕ ವರದಿಗಳನ್ನು ಬಿತ್ತರಿಸುತ್ತಿವೆ. ಇದು ಮಾನವೀಯತೆ ಇಲ್ಲದ ಕ್ರೂರಿಗಳ ಪರವಾಗಿ ನಿಲ್ಲುವ ಹುನ್ನಾರ. ಗುಜರಾತಿನಲ್ಲಿ ಬಿಲ್ಕಿಸ್ ಬಾನೋರನ್ನು ಅತ್ಯಾಚಾರ ಮಾಡಿ ಅವರ ಇಡೀ ಕುಟುಂಬವನ್ನು ಕೊಂದ ರಾಕ್ಷಸಿ ಮನಸ್ಥಿತಿಯ ಕ್ರೂರಿಗಳನ್ನು ಸಂಸ್ಕಾರಿ ಬ್ರಾಹ್ಮಣರು ಎಂದು ಕರೆದು ಬಿಡುಗಡೆ ಮಾಡಿದ ರೀತಿಯಲ್ಲಿದೆ ಎಂದು ತಮ್ಮ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.



Join Whatsapp