ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಆರ್ ಜೆಡಿಯ ತೇಜಸ್ವಿ ಯಾದವ್, ಎಚ್ ಎಎಂನ ಜಿತನ್ ರಾಂ ಮಾಂಜಿ, ವಿಐಪಿಯ ಮುಖೇಶ್ ಸಹಾನಿ, ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಬಿಹಾರದಲ್ಲಿ ಚುನಾವಣೆಗೆ ಮೊದಲೇ ಜಾತಿ ಜನಗಣತಿ ನಡೆಸುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಜನತಾ ದಳದ ತೇಜಸ್ವಿ ಯಾದವ್ ಅವರು ಇಡೀ ದೇಶದಲ್ಲಿ ಆದಷ್ಟು ಬೇಗ ಜಾತಿ ಜನಗಣತಿ ನಡೆಸಬೇಕು ಎಂಬ ಬೇಡಿಕೆಯನ್ನು ಮಂಡಿಸಿದರು. ಪ್ರಧಾನಿಯವರು ನಮ್ಮ ಮಾತನ್ನು ಆಲಿಸಿ ಸಾಧ್ಯವಾದುದನ್ನು ಮಾಡುವುದಾಗಿ ಭರವಸೆ ನೀಡಿದರು ಎಂದು ನಿತೀಶ್ ಪತ್ರಕರ್ತರಿಗೆ ತಿಳಿಸಿದರು.
ಕರ್ನಾಟಕದಲ್ಲಿ ಒಂದು ಜಾತಿ ಜನಗಣತಿ ನಡೆದಿದ್ದು, ಅದು ವಿವಾದದಿಂದ ಮೂಲೆಗೆ ಬಿದ್ದಿದೆ. ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ವಿಷಯ ಕೋರ್ಟಲ್ಲಿ ಇರುವುದರಿಂದ ನಾನು ಏನೂ ಮಾತನಾಡುವುದಿಲ್ಲ ಎಂದಿದ್ದಾರೆ.