21ನೇ ಶತಮಾನದಲ್ಲೂ ಭಾರತದಲ್ಲಿ ಜಾತಿ ಆಧಾರಿತ ತಾರತಮ್ಯ: ಮಾಜಿ ಸ್ಪೀಕರ್ ಮೀರಾ ಕುಮಾರ್

Prasthutha|

ಹೊಸದಿಲ್ಲಿ: 21ನೇ ಶತಮಾನದಲ್ಲೂ ಭಾರತದಲ್ಲಿ ಜಾತಿ ಆಧಾರಿತ ತಾರತಮ್ಯ ಅಸ್ತಿತ್ವದಲ್ಲಿದೆ ಎಂದು ಮಾಜಿ ಸ್ಪಿಕರ್ ಮೀರಾ ಕುಮಾರ್ ಹೇಳಿದ್ದಾರೆ.
ಭಾರತದಲ್ಲಿ 21ನೇ ಶತಮಾನದಲ್ಲೂ ಜಾತಿ ಆಧಾರಿತ ತಾರತಮ್ಯ ಅಸ್ತಿತ್ವದಲ್ಲಿದ್ದು, ದೇಶದಲ್ಲಿ ಎರಡು ರೀತಿಯ ಹಿಂದುಗಳಿದ್ದಾರೆ. ದೇವಸ್ಥಾನಗಳಿಗೆ ಪ್ರವೇಶಿಸಬಹುದಾದವರು ಹಾಗೂ ಪ್ರವೇಶಿಸಲು ಸಾಧ್ಯವಿಲ್ಲದವರು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

ಸಮಾರಂಭವೊಂದರ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ನಾವು 21ನೇ ಶತಮಾನದಲ್ಲಿ ಜೀವಿಸುತ್ತಿದ್ದೇವೆ, ಮಿರುಗುವ ರಸ್ತೆಗಳನ್ನು ಹೊಂದಿದ್ದೇವೆ. ಆದರೆ ಈ ರಸ್ತೆಗಳಲ್ಲಿ ಸಂಚರಿಸುವ ಹಲವರು ಈಗಲೂ ಜಾತಿ ವ್ಯವಸ್ಥೆಯಿಂದ ಬಾಧಿತರಾಗಿದ್ದಾರೆ. ನಮ್ಮ ಮನಸ್ಸುಗಳು ಯಾವಾಗ ಮಿರುಗಲಿವೆ? ಜಾತಿ ಆಧಾರಿತ ಭಾವನೆಗಳನ್ನು ಯಾವಾಗ ಓಡಿಸಲಿದ್ದೇವೆ?” ಎಂದು ಅವರು ಪ್ರಶ್ನಿಸಿದ್ದಾರೆ.



Join Whatsapp