ಜಾತಿ ನಿಂದನೆ ಆರೋಪ: ಪ್ರೀತಿಸಿ ಮದುವೆಯಾದ ನವವಿವಾಹಿತೆ ನಿಗೂಢ ಸಾವು !

Prasthutha|

ಕಲಬುರಗಿ: ಮದುವೆಯಾದ ಮೂರೇ ತಿಂಗಳಲ್ಲಿ ಯುವತಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಗರದ ರಾಜಾಪುರ ಬಡಾವಣೆಯಲ್ಲಿ ನಡೆದಿದೆ.

- Advertisement -

ರಮಾಬಾಯಿ (23) ಮೃತಪಟ್ಟ ಮಹಿಳೆ.

ಕಳೆದ ಮೂರು ತಿಂಗಳ ಹಿಂದೆಯಷ್ಟೇ ರಾಹುಲ್ ಎನ್ನುವ ಯುವಕನನ್ನು ರಮಾಬಾಯಿ ಪ್ರೀತಿಸಿ ಮದುವೆಯಾಗಿದ್ದಳು‌. ರಾಹುಲ್ ರಮಾಬಾಯಿಯನ್ನು ಮನೆಯಿಂದ ಗುಟ್ಟಾಗಿ ಕರೆದೊಯ್ದು ಮದುವೆಯಾಗಿದ್ದ ಎನ್ನಲಾಗ್ತಿದೆ.

- Advertisement -

ಮದುವೆಯ ಬಳಿಕ ಗಂಡನ ಮನೆಯವರಿಂದ ನಿತ್ಯವು ಜಾತಿ ನಿಂದನೆ ಮಾಡಿ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ರಮಾಬಾಯಿ ಗುರುವಾರ ಸಂಜೆ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದಾಳೆ. ಗಂಡನ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Join Whatsapp