ಪ್ರಧಾನಿ ಮೋದಿಯ ಭಾಷಣದ ಮಿಮಿಕ್ರಿ ಮಾಡಿದ ಶಿವಸೇನೆ ನಾಯಕರ ವಿರುದ್ಧ ಪ್ರಕರಣ ದಾಖಲು

Prasthutha|

ಮುಂಬೈ: ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಕೇಂದ್ರ ಸಚಿವ ನಾರಾಯಣ್ ರಾಣೆ ಅವರ ಭಾಷಣದ ಮಿಮಿಕ್ರಿ ಮಾಡಿದ್ದಕ್ಕಾಗಿ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಏಳು ನಾಯಕರ ವಿರುದ್ಧ ಥಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

- Advertisement -

ಅಕ್ಟೋಬರ್ 9 ರಂದು ನಡೆದ ಮಹಾಪ್ರಬೋಧನ್ ಯಾತ್ರೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಕೇಂದ್ರ ಸಚಿವ ನಾರಾಯಣ್ ರಾಣೆ ಅವರನ್ನು ವ್ಯಂಗ್ಯವಾಗಿ ಮಿಮಿಕ್ರಿ ಮಾಡಿದ್ದಕ್ಕಾಗಿ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಏಳು ನಾಯಕರ ವಿರುದ್ಧ ಥಾಣೆಯ ನೌಪಾಡಾ ಪೊಲೀಸ್ ಠಾಣೆಯಲ್ಲಿ ಐಪಿಸಿ  ಸೆಕ್ಷನ್ 153, 500 ಮತ್ತು 504 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶಿಂಧೆ ಅವರ ಬಾಳಾಸಾಹೇಬಂಚಿ ಶಿವಸೇನೆಯ ಕಾರ್ಯಕರ್ತ ದತ್ತಾರಾಮ್ ಗವಾಸ್ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸೇನಾ ಸಂಸದ ಅರವಿಂದ್ ಸಾವಂತ್, ಉಪ ನಾಯಕಿ ಸುಷ್ಮಾ ಅಂಧರೆ ಮತ್ತು ಶಾಸಕ ಭಾಸ್ಕರ್ ಜಾಧವ್ ಸೇರಿದಂತೆ ಇತರ ನಾಯಕರ ಮೇಲೆ  ಪ್ರಕರಣ ದಾಖಲಿಸಿದ್ದಾರೆ.

- Advertisement -

ಈ ವಾರ ಥಾಣೆಯಲ್ಲಿ ನಡೆದ ಸಾರ್ವಜನಿಕ ಜಾಥಾದಲ್ಲಿ ಭಾರತೀಯ ಜನತಾ ಪಕ್ಷದ ಕೇಂದ್ರ ಎಂಎಸ್ ಎಂಇ ಸಚಿವ ನಾರಾಯಣ್ ರಾಣೆ ಅವರನ್ನು ‘ಕೊಂಬ್ಡಿ ಚೋರ್’ (ಕೋಳಿ ಕಳ್ಳ) ಎಂದು ಲೇವಡಿ ಮಾಡಿದ್ದಕ್ಕಾಗಿ ಸಾವಂತ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ಅಕ್ಟೋಬರ್ 5 ರಂದು ನಡೆದ ದಸರಾ ಜಾಥಾದಲ್ಲಿ ಸಿದ್ಧ ಭಾಷಣವನ್ನು ಓದುವ ಶಿಂಧೆ ಅವರ ಶೈಲಿಯನ್ನು ಮಿಮಿಕ್ರಿ ಮಾಡಿದ್ದಕ್ಕಾಗಿ ಜಾಧವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಥಾಣೆ ಸಭೆಯಲ್ಲಿ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆಗಳನ್ನು ಅನುಕರಿಸಿದ್ದಕ್ಕಾಗಿ ‘ಅಂಧರೆ’ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.



Join Whatsapp