ಕೊಚ್ಚಿ: ಯೇಸುಕ್ರಿಸ್ತನ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಮಲಪ್ಪುರಂ ಜಿಲ್ಲೆಯ ಕೊಂಡಟ್ಟಿ ನಿವಾಸಿ ಹಾಗೂ ಮುಸ್ಲಿಂ ಧರ್ಮಗುರು ವಾಸೀಮ್ ಅಲ್ ಹಿಕಾಮಿ ವಿರುದ್ಧ ಕೊಚ್ಚಿ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಅನೂಪ್ ಆಂಟನಿ ನೀಡಿದ ದೂರಿನ ಮೇರೆಗೆ ಎರ್ನಾಕುಲಂ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರು ಐಪಿಸಿಯ 153-ಎ, 295-ಎ ಮತ್ತು 505 ರ ಅಡಿಯಲ್ಲಿ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಡಿಸೆಂಬರ್ 24, 2021 ರಂದು ಯೂಟ್ಯೂಬ್ ನಲ್ಲಿ ಕ್ರಿಶ್ಚಿಯನ್ ಧಾರ್ಮಿಕ ಭಾವನೆಗಳು ಮತ್ತು ಕ್ರಿಸ್ಮಸ್ ಗೆ ಸಂಬಂಧಿಸಿದಂತೆ ಯೇಸುಕ್ರಿಸ್ತನ ಜನನದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು ಎನ್ನಲಾಗಿದೆ.