ಕೇಜ್ರಿವಾಲ್ ವಿರುದ್ಧ ಗುಡುಗಿದ್ದ ಕುಮಾರ್ ವಿಶ್ವಾಸ್ ಮೇಲೆ ಕೇಸ್ ದಾಖಲು

Prasthutha|

ನವದೆಹಲಿ:  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಆಮ್ ಆದ್ಮಿ ಪಕ್ಷದ ಮಾಜಿ ನಾಯಕ ಕುಮಾರ್ ವಿಶ್ವಾಸ್  ವಿರುದ್ಧ ಪಂಜಾಬ್ ಪೊಲೀಸರು ಬುಧವಾರ ಕೇಸ್ ದಾಖಲಿಸಿದ್ದಾರೆ.

- Advertisement -

ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸಿದ ಆರೋಪದ ಮೇಲೆ ಕುಮಾರ್ ವಿಶ್ವಾಸ್ ವಿರುದ್ಧ ಪಂಜಾಬ್ ಪೊಲೀಸರು ಪ್ರಕರಣ ದಾಖಲಿಸಿದ್ದು ಏಪ್ರಿಲ್ 26ಕ್ಕೂ ಮುಂಚೆ ವಿಚಾರಣೆಗೆ ಹಾಜರಾಗುವಂತೆ ಕುಮಾರ್ ವಿಶ್ವಾಸ್ ಗೆ ಸಮನ್ಸ್ ಜಾರಿ ಮಾಡಿದ್ದಾರೆ.

ಕುಮಾರ್ ವಿಶ್ವಾಸ್ ನಿವಾಸಕ್ಕೆ ಪೊಲೀಸ್ ಭೇಟಿ ನೀಡಿದ್ದು ಏಪ್ರಿಲ್ 26 ರೊಳಗೆ ತನಿಖೆಗೆ ಹಾಜರಾಗಲು ವಿಫಲರಾದರೆ ಕಾನೂನಿನ ಪ್ರಕಾರ ಅವರನ್ನು ಬಂಧಿಸಬಹುದು” ಎಂದು ರೂಪನಗರದ ಹಿರಿಯ ಪೊಲೀಸ್ ಅಧೀಕ್ಷಕ ಸಂದೀಪ್ ಗಾರ್ಗ್ ಅವರು ಹೇಳಿದ್ದಾರೆ.

- Advertisement -

 ಪಂಜಾಬ್ ಪೊಲೀಸರು ತಮ್ಮ ನಿವಾಸಕ್ಕೆ ಬಂದಿದ್ದನ್ನು ಟ್ವೀಟ್ ಮೂಲಕ ಖಚಿತಪಡಿಸಿರುವ ಕುಮಾರ್ ವಿಶ್ವಾಸ್, ಪಂಜಾಬ್ ಸಿಎಂ ಭಗವಂತ್ ಮಾನ್ ಅವರನ್ನು ಎಚ್ಚರಿಸುತ್ತಾ, ಇಂದು ಬೆಳಗ್ಗೆ ಪಂಜಾಬ್ ಪೊಲೀಸರು ನಮ್ಮ ಮನೆ ಬಾಗಿಲ ಬಳಿ ಬಂದಿದ್ದರು. ಹೌದು, ಕೇಜ್ರಿವಾಲ್ ಮುಂದೊಂದು ದಿನ ನಿಮಗೆ ಮತ್ತು ಪಂಜಾಬ್‌ಗೆ ದ್ರೋಹ ಮಾಡುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

ಈ ವರ್ಷದ ಪಂಜಾಬ್ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿ ಆಮ್ ಆದ್ಮಿ ಪಕ್ಷದ ಮಾಜಿ ನಾಯಕ ಕುಮಾರ್ ವಿಶ್ವಾಸ್ ವಾಗ್ದಾಳಿ ನಡೆಸಿದ್ದರು.

ಪರೋಕ್ಷವಾಗಿ ಕೇಜ್ರಿವಾಲ್ ಅವರನ್ನು ಸ್ವತಂತ್ರ ರಾಷ್ಟ್ರವಾದ ಖಲಿಸ್ತಾನದ ಪ್ರಧಾನಿಯಾಗಲು ಬಯಸುತ್ತಾರೆ ಎಂದಿದ್ದರು. ಈ ಸಂಬಂಧ ಎಎಪಿ ಕಾರ್ಯಕರ್ತರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಕುಮಾರ್ ವಿಶ್ವಾಸ್ ವಿರುದ್ಧ ಪಂಜಾಬ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.



Join Whatsapp