ಸಾಕುಪ್ರಾಣಿಗಳ ಆಹಾರ ತಯಾರಿಕಾ ಕಾರ್ಖಾನೆಯಲ್ಲಿ ಗೋಮಾಂಸ ಬಳಕೆ ಆರೋಪ: ಕಮಲೇಶ್ ವಿರುದ್ಧ ಪ್ರಕರಣ ದಾಖಲು

Prasthutha|

ಶಿವಮೊಗ್ಗ: ಸಾಕು ಪ್ರಾಣಿಗಳ ಆಹಾರ ತಯಾರಿಕಾ ಕಾರ್ಖಾನೆಯಲ್ಲಿ ಗೋಮಾಂಸ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಭದ್ರಾವತಿಯ ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಕಾರ್ಖಾನೆಗೆ ತುಂಗಾನಗರ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ.

- Advertisement -


ಕಾರ್ಖಾನೆಯಲ್ಲಿ ಸಾಕು ಪ್ರಾಣಿಗಳ ಆಹಾರ ತಯಾರಿಕೆಗೆ ಹಸುಗಳ ಮಾಂಸ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಕಮಲೇಶ್ ಎಂಬವರಿಗೆ ಸೇರಿದ ಮಲ್ನಾಡ್ ಪ್ರೋ ರಿಚ್ ಎಂಬ ಕಾರ್ಖಾನೆ ಮೇಲೆ ದಾಳಿ ನಡೆಸಿದ್ದಾರೆ.


ಈ ಕಾರ್ಖಾನೆಯಲ್ಲಿ ಪಾಲಿಕೆ ವ್ಯಾಪ್ತಿಯಿಂದ ಬರುವ ಕೋಳಿಯ ತ್ಯಾಜ್ಯ ಸಂಗ್ರಹಿಸಿ ಸಾಕು ಪ್ರಾಣಿಗಳಿಗೆ ಆಹಾರದ ಪ್ಯಾಕೇಟ್ ಗಳನ್ನು ಸಿದ್ಧಪಡಿಸಲಾಗುತ್ತದೆ. ಆದರೆ ಗುರುವಾರ ದಾಳಿ ವೇಳೆ ಕಾರ್ಖಾನೆಯಲ್ಲಿ ಕರುವಿನ ತಲೆಯು ಪತ್ತೆಯಾಗಿದೆ. ಹೀಗಾಗಿ ಈ ಸಾಕು ಪ್ರಾಣಿಗಳ ಆಹಾರ ತಯಾರಿಕಾ ಕಾರ್ಖಾನೆಯಲ್ಲಿ ಹಸುಗಳ ಮಾಂಸವನ್ನು ಬಳಸಲಾಗುತ್ತಿದೆ ಎಂಬ ಅನುಮಾನ ಪೊಲೀಸರದ್ದಾಗಿದೆ.

- Advertisement -


ಹೀಗಾಗಿ ದಾಳಿ ನಡೆಸಿರುವ ಪೊಲೀಸರು ಒಂದು ಕಾರಿ 12 ಫೀಡಿಂಗ್ ಪುಡ್ ಚೀಲಗಳನ್ನು ವಶಪಡಿಸಿಕೊಂಡು, ಆರೋಪಿ ಕಮಲೇಶ್ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.

Join Whatsapp