ಮತಯಂತ್ರಕ್ಕೆ ಮಾಲಾರ್ಪಣೆ ಮಾಡಿದ ಪಕ್ಷೇತರ ಅಭ್ಯರ್ಥಿ ವಿರುದ್ಧ ಪ್ರಕರಣ

Prasthutha|

ನಾಸಿಕ್: ಮತಚಲಾಯಿಸುವ ವೇಳೆ ಇವಿಎಂ ಯಂತ್ರಕ್ಕೆ ಮಾಲಾರ್ಪಣೆ ಮಾಡಿದ ನಾಸಿಕ್ ನ ಪಕ್ಷೇತರ ಅಭ್ಯರ್ಥಿ ಶಾಂತಿಗಿರಿ ಮಹಾರಾಜ್ ಅವರ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪಡಿ ದೂರು ದಾಖಲಿಸಲಾಗಿದೆ.

- Advertisement -

ತ್ರಿಂಬಕೇಶ್ವರದಲ್ಲಿರುವ ಎಂವಿಪಿ ಕಾಲೇಜು ಮತಗಟ್ಟೆಗೆ 25–30 ಬೆಂಬಲಿಗರೊಂದಿಗೆ ಬಂದ ಮಹಾರಾಜ್ ಅವರು, ತನ್ನ ಕತ್ತಲ್ಲಿದ್ದ ಮಾಲೆಯೊಂದನ್ನು ತೆಗೆದು ಇವಿಎಂ ಯಂತ್ರಕ್ಕೆ ಹಾಕಿದ್ದಾರೆ. ಬಳಿಕ ಮತ ಚಲಾಯಿಸಿದ್ದಾರೆ ಎಂದು ಪೊಲೀಂಗ್ ಅಧಿಕಾರಿ ದೂರಿನಲ್ಲಿ ಹೇಳಿದ್ದಾರೆ.



Join Whatsapp