ಬೋರ್ಡ್ ಸಭೆಯಲ್ಲಿ ವಾರ್ಡ್ ಸದಸ್ಯೆ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ: ಮುಸ್ಲಿಂ ಲೀಗ್ ನ ಷಡ್ಯಂತ್ರದ ಬಗ್ಗೆ ತನಿಖೆ ನಡೆಯಲಿ; SDPI

Prasthutha|

- Advertisement -

ಮಂಜೇಶ್ವರ: ಗ್ರಾಮ ಪಂಚಾಯತ್ ಸದಸ್ಯೆ ಆಯಿಶತ್ ರುಬೀನ ಪಂಚಾಯತ್ ಆಡಳಿತ ಸಮಿತಿ ಸಭೆಯ ಮದ್ಯೆ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣದ ಹಿಂದೆ ಮುಸ್ಲಿಂ ಲೀಗ್ ನ ಷಡ್ಯಂತ್ರವನ್ನು ತನಿಖೆ ನಡೆಸಬೇಕೆಂದು ಎಸ್.ಡಿ.ಪಿ.ಐ ಮಂಜೇಶ್ವರ ಪಂಚಾಯತ್ ಸಮಿತಿ ಆಗ್ರಹಿಸಿದೆ.


ಪಂಚಾಯತ್ ವ್ಯಾಪ್ತಿಗೊಳಪಟ್ಟ ಅಂಬಿತ್ತಾಡಿ ಎಂಬಲ್ಲಿ ಕಳೆದ ಆಡಳಿತ ಸಮಿತಿಯ ಕಾಲದಲ್ಲಿ ಮಚ್ಚಂಪಾಡಿ 7-ನೇ ವಾರ್ಡ್ ಸದಸ್ಯ ಫೈಝಲ್ ಮಚ್ಚಂಪಾಡಿಯ ಮುಂದಾಳುತ್ವದಲ್ಲಿ ಪಕ್ಷದ ಮಂಜೇಶ್ವರ ಪಂಚಾಯತ್ ಸಮಿತಿ ಹಾಗೂ ಊರ ನಾಗರಿಕರಿಂದ ಹಣ ಸಂಗ್ರಹಿಸಿ ಅಂಗನವಾಡಿ ನಿರ್ಮಾಣಕ್ಕೆ ಭೂಮಿಯನ್ನು ಖರೀದಿಸಲಾಗಿತ್ತು. ತದನಂತರ ಬಂದ ಮುಸ್ಲಿಂ ಲೀಗ್ ವಾರ್ಡ್ ಸದಸ್ಯ ಹಾಗೂ ಮುಸ್ಲಿಂ ಲೀಗ್ ನವರು ಪಂಚಾಯತ್ ಆಡಳಿತ ಸಮಿತಿ ಮಂಜೂರುಗೊಳಿಸಿದ ಅಂಗನವಾಡಿ ಈ ಸ್ಥಳದಲ್ಲಿ ನಿರ್ಮಾಣಗೊಳ್ಳುವುದನ್ನು ತಡೆದರು.

- Advertisement -


ಅಂಬಿತ್ತಾಡಿ ಅಂಗನವಾಡಿ ವಿಷಯದಲ್ಲಿ ಮುಸ್ಲಿಂ ಲೀಗ್ ಪಕ್ಷದೊಳಗೆ , ಪಂಚಾಯತ್ ವ್ಯಾಪಕವಾಗಿ , ವಾರ್ಡ್ ಸದಸ್ಯನ ವಿರುದ್ಧವೂ ಹಾಗೂ ಮುಸ್ಲಿಂ ಲೀಗ್ ವಿರುದ್ಧವೂ ನಾಗರಿಕರು ಪ್ರತಿಭಟನೆ ನಡೆಸಿದ್ದರು. ಈ ಕಲುಷಿತಗೊಂಡ ವಾತಾವರಣವನ್ನು ತಿಳಿಗೊಳಿಸಲು ಬೇಕಾಗಿ ಆಡಳಿತ ಸಮಿತಿ ಸಭೆಯ ಮದ್ಯೆ ಮುಸ್ಲಿಂ ಲೀಗ್ ವಾರ್ಡ್ ಸದಸ್ಯೆಗೆ ನಿದ್ರೆಯ ಮಾತ್ರೆಯನ್ನು ನೀಡಿ “ವಾರ್ಡ್ ಸದಸ್ಯೆ ಆತ್ಮಹತ್ಯೆಗೆ ಯತ್ನ ” ಎಂಬ ನಾಟಕ ಮಾಡಿರುವುದರ ಹಿಂದೆ ಮುಸ್ಲಿಂ ಲೀಗ್ ಪಕ್ಷದ ಷಡ್ಯಂತರವಾಗಿದೆ. ಸ್ವಂತ ಪಕ್ಷದ ವಾರ್ಡ್ ಸದಸ್ಯೆಯ ಜೀವಹಾನಿ ಮಾಡುವ ರೀತಿಯಲ್ಲಿ ಆಡಿದ ನಾಟಕ ಗಂಭೀರ ವಿಷಯವಾಗಿದ್ದು ಊರಿನ ಪ್ರಬುದ್ಧ ನಾಗರಿಕರು ಈ ವಿಷಯವನ್ನು ಅರ್ಥೈಸಿದ್ದಾರೆಂದು ಎಸ್.ಡಿ.ಪಿ.ಐ ಮಂಜೇಶ್ವರ ಪಂಚಾಯತ್ ಸಮಿತಿ ಅಧ್ಯಕ್ಷ ಇಕ್ಬಾಲ್ ಕುಂಜತ್ತೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp