ಟಾಕ್ಸಿಕ್ ಸಿನೆಮಾ ಸೆಟ್ ಗಾಗಿ ಮರಗಳನ್ನು ನಾಶಗೊಳಿಸಿದ ಪ್ರಕರಣ: ‘HMT’ ಸ್ಪಷ್ಟನೆ

Prasthutha|

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ನಟನೆಯ ಟಾಕ್ಸಿಕ್ ಸಿನಿಮಾ ಚಿತ್ರೀಕರಣಕ್ಕಾಗಿ HMT ವಶದಲ್ಲಿದ್ದ ಅರಣ್ಯ ನಾಶ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೇ ಮೊದಲ ಬಾರಿಗೆ HMT ಗ್ರೂಪ್ ಆಫ್ ಕಂಪನೀಸ್ ಟ್ವೀಟ್ ಮುಖಾಂತರ ಸ್ಪಷ್ಟನೆ ನೀಡಿದೆ.

- Advertisement -


ಎಚ್ ಎಂಟಿ ವಶದಲ್ಲಿದ್ದ ಅರಣ್ಯ ಭೂಮಿಯನ್ನು ಸಿನಿಮಾ ಚಿತ್ರೀಕರಣಕ್ಕೆ ಮತ್ತು ಆ ಖಾಲಿ ಜಾಗವನ್ನು ದಿನದ ಬಾಡಿಗೆ ಆಧಾರದ ಮೇಲೆ ಬಾಡಿಗೆ ನೀಡಲಾಗುತ್ತಿದೆ.


ಈ ಜಾಗವನ್ನು ಎಚ್ ಎಂಟಿ ಕೆನರಾ ಬ್ಯಾಂಕ್ ಗೆ ಮಾರಾಟ ಮಾಡಿದೆ ಎಂದೂ ಹೇಳಲಾಗುತ್ತಿದೆ. ಆ ಜಾಗದಲ್ಲಿದ್ದ ನೂರಾರು ಮರಗಳನ್ನು ಅರಣ್ಯ ಇಲಾಖೆಯ ಪೂರ್ವಾನುಮತಿ ಇಲ್ಲದೇ ಟಾಕ್ಸಿಕ್ ಸಿನಿಮಾ ತಂಡ ಕಡಿದು ಹಾಕಲಾಗಿದೆ ಎಂಬುದು ಅರಣ್ಯ ಇಲಾಖೆಯ ಗಂಭೀರ ಆರೋಪವಾಗಿದೆ.

- Advertisement -


ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ HMT ಟ್ವೀಟ್ ಮುಖಾಂತರ ಸ್ಪಷ್ಟನೆ ನೀಡಿದ್ದು, ಸಿನೆಮಾ ಸೆಟ್ ಗಾಗಿ ಮರ ಕಡಿದಿರುವ ಪ್ರಕರಣ ವಿವಾದದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಹೆಚ್ ಎಂ ಟಿ, ಮರ ಕಡಿದ ಜಾಗ ಈಗ ಕೆನರಾ ಬ್ಯಾಂಕ್ ಒಡೆತನದಲ್ಲಿ ಇದೆ. ಚಿತ್ರಿಕರಣಕ್ಕೆ ಬಾಡಿಗೆ ನೀಡಿದ್ದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಎಚ್ ಎಮ್ ಟಿ ಮಾಲಿಕತ್ತದ ಭೂಮಿಯಲ್ಲಿ ಯಾವುದೇ ಮರವನ್ನು ಕತ್ತರಿಸುವುದಿಲ್ಲ ಎಂದು ಮೊದಲ ಬಾರಿಗೆ ಟ್ವೀಟ್ ಮೂಲಕ HMT ಸ್ಪಷ್ಟನೆ ನೀಡಿದೆ.


ಇತ್ತ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆ ಸ್ಯಾಟಲೈಟ್ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಇದು ಅಕ್ಷಮ್ಯ ಅಪರಾಧ ಎಂದು ಪರಿಗಣಿಸಿ, ಕಠಿಣ ಕಾನೂನು ಕ್ರಮಕ್ಕೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಂಡಕ್ಕೂ ನೋಟೀಸ್ ನೀಡಲಾಗಿದೆ.



Join Whatsapp