ತಿರುವನಂತಪುರಂ: ನೀಟ್ ಪರೀಕ್ಷೆಗೂ ಮುನ್ನ ಒಳ ಉಡುಪು ಕಳಚುವಂತೆ ಸೂಚಿಸಿದ ತಪಾಸಣಾ ಉಸ್ತುವಾರಿ ಹೊತ್ತುಕೊಂಡಿದ್ದ ಎಜೆನ್ಸಿಯ ಮಹಿಳಾ ಉದ್ಯೋಗಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೊಲ್ಲಂ ಗ್ರಾಮಾಂತರ ಠಾಣೆಯಲ್ಲಿ ವಿದ್ಯಾರ್ಥಿನಿ ನಿನ್ನೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, 354, 509 ಐಪಿಸಿ ಅನ್ವಯ ಪ್ರಕರಣ ದಾಖಲಿಸಿದ್ದಾರೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ತಪಾಸಣೆಯ ಉಸ್ತುವಾರಿ ವಹಿಸಿದ್ದು, ಇದರ ಮಹಿಳಾ ಉದ್ಯೋಗಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರು ನೀಡಿದ ಬೆನ್ನಲ್ಲೇ ಚಡಯಮಂಗಳಂ ಪೊಲೀಸರು ಸಂತ್ರಸ್ತ ವಿದ್ಯಾರ್ಥಿನಿಯ ಮನೆಗೆ ಬಂದು ಹೇಳಿಕೆ ಪಡೆದುಕೊಂಡಿದ್ದಾರೆ. ಬಳಿಕ ಮತ್ತೋರ್ವ ಸಂತ್ರಸ್ತ ವಿದ್ಯಾರ್ಥಿನಿ ಈಮೈಲ್ ಮೂಲಕ ದೂರು ಪೊಲೀಸರಿಗೆ ನೀಡಿದ್ದಾಳೆ.
ಸದ್ಯ ಮಹಿಳಾ ಉದ್ಯೋಗಿಯ ಗುರುತು ಪತ್ತೆ ಹಚ್ಚಲಾಗಿದ್ದು, ಬಂಧನಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಕೇರಳದ ಮಾಧ್ಯಮವೊಂದು ವರದಿ ಮಾಡಿದೆ.