ಕಾಳಿ ಕುರಿತು ಹೇಳಿಕೆ: ಟಿಎಂಸಿಯ ಮಹುವಾ ಮೊಯಿತ್ರಾ ವಿರುದ್ಧ ಪ್ರಕರಣ ದಾಖಲು

Prasthutha|

ಕೋಲ್ಕತ್ತಾ: ಕಾಳಿ ದೇವತೆ ಬಗ್ಗೆ ಹೇಳಿಕೆ ಮೂಲಕ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಧಾರ್ಮಿಕ ಭಾವನೆಗೆ ಘಾಸಿ ಉಂಟು ಮಾಡಿದ್ದಾರೆ ಎಂದು ಬಿಜೆಪಿಯ ಜಿತೇನ್ ಚಟರ್ಜಿ ನೀಡಿದ ದೂರಿನ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ.

- Advertisement -

“ನಾನು ಕೂಡ ಕಾಳಿ ಆರಾಧಕಿ. ನಾನು ಯಾವುದಕ್ಕೂ ಹೆದರುವುದಿಲ್ಲ. ನಾನು ತಿಳಿಗೇಡಿಯೇನಲ್ಲ. ನಿಮ್ಮ ಗೂಂಡಾಗಳು, ನಿಮ್ಮ ಪೊಲೀಸರು, ನಿಮ್ಮ ಟ್ರಾಲ್ ಗಳಿಗೆ ಕಿಮ್ಮತ್ತು ನೀಡುವುದಿಲ್ಲ. ಸತ್ಯಕ್ಕೆ ಯಾರ ಬೆಂಬಲ ಬೇಕಾಗಿಲ್ಲ” ಎಂದು ಮಹುವಾ ಟ್ವೀಟ್  ಮಾಡಿದ್ದಾರೆ.

ಸಂಸದೆ ಮಹುವಾ ಅವರು ಸಮಾವೇಶವೊಂದರಲ್ಲಿ ಕಾಳಿ ಮಾತೆಯು ಮಾಂಸಾಹಾರಿ ಮತ್ತು ಮದ್ಯ ಒಪ್ಪುವ ದೇವಿ ಎಂದು ಹೇಳಿದ್ದರು ಎನ್ನಲಾಗಿದೆ.

- Advertisement -

“ನೀವು ಭೂತಾನ್, ಸಿಕ್ಕಿಂಗಳಿಗೆ ಹೋದರೆ ಪೂಜಾ ಕಾಲದಲ್ಲಿ ದೇವರಿಗೆ ಅವರು ವಿಸ್ಕಿ ಅರ್ಪಿಸುತ್ತಾರೆ. ಉತ್ತರಪ್ರದೇಶದ ಕೆಲವೆಡೆಯೂ ವಿಸ್ಕಿ ಪ್ರಸಾದ ನೀಡುತ್ತಾರೆ. ಅದನ್ನು ಧರ್ಮ ನಿಂದನೆ ಎನ್ನುತ್ತೀರಾ?” ಎಂದು ಮಹುವಾ ಪ್ರಶ್ನಿಸಿದ್ದಾರೆ.

“ಪಶ್ಚಿಮ ಬಂಗಾಳದ ಬೀರ್ಭೂಮ್ ಜಿಲ್ಲೆಯ ಶಕ್ತಿ ತಾರಾ ಪೀಠಕ್ಕೆ ಹೋದರೆ ಸಾಧುಗಳು ನಾನಾ ಹೊಗೆಬತ್ತಿ ಸೇದುತ್ತಿರುವುದನ್ನು ನೋಡಬಹುದು. ಜನರು ಕಾಳಿಯನ್ನು ಪೂಜಿಸುವ ವಿಧಾನವದು. ಹಿಂದೂ ಧರ್ಮದೊಳಗಡೆಯೇ, ಕಾಳಿ ಆರಾಧಕಳಾಗಿ ನಾನು ನಮ್ಮ ದೇವಿಯನ್ನು ಬಲ್ಲೆ, ಕಲ್ಪಿಸಿಕೊಳ್ಳಬಲ್ಲೆ. ಇದು ನನ್ನ ಸ್ವಾತಂತ್ರ್ಯ” ಮೊಹುವಾ ಹೇಳಿದ್ದರು.

“ನಾನು ನನ್ನ ಕಾಳಿಯನ್ನು ಪೂಜಿಸುತ್ತೇನೆ, ನಿಮ್ಮ ಬಿಳಿ ಬಟ್ಟೆಯ ಸಸ್ಯಾಹಾರಿ ಕಾಳಿಯನ್ನೂ ಪೂಜಿಸುತ್ತೇನೆ” ಎಂದೂ ಅವರು ಹೇಳಿದ್ದರು.



Join Whatsapp