ಸರಯೂ ನದಿಯಲ್ಲಿ ಪತ್ನಿಗೆ ಮುತ್ತು ಕೊಟ್ಟ ಪತಿಗೆ ಥಳಿತ: 12 ಮಂದಿ ವಿರುದ್ಧ ಕೇಸ್

Prasthutha|

ಲಕ್ನೋ: ಅಯೋಧ್ಯೆಯಲ್ಲಿನ ಸರಯೂ ನದಿಯಲ್ಲಿ ಸ್ನಾನ ಮಾಡುವ ವೇಳೆ ಪತ್ನಿಗೆ ಮುತ್ತು ಕೊಟ್ಟಿದ್ದ ಪತಿಗೆ ನಿಂದಿಸಿ ಹಿಗ್ಗಾಮುಗ್ಗಾ ಥಳಿಸಿದ್ದ 12 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಥಳಿತದ ವೀಡಿಯೋ ವೈರಲ್ ಆದ ಒಂದು ದಿನದ ಬಳಿಕ ವ್ಯಕ್ತಿ ಮೇಲೆ ಹಲ್ಲೆಗೈದವರ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

- Advertisement -


ವ್ಯಕ್ತಿಗೆ ಆತನ ಪತ್ನಿಯ ಎದುರೇ ಗುಂಪೊಂದು ಥಳಿಸಿದ್ದು,, ಪತಿಯನ್ನು ರಕ್ಷಿಸಲು ಪತ್ನಿ ಪ್ರಯತ್ನಿಸುತ್ತಿರುವುದು ವೀಡಿಯೋದಲ್ಲಿದೆ. ಅಯೋಧ್ಯೆಯಲ್ಲಿ ಇಂತಹ ಅಸಹ್ಯವನ್ನು ಸಹಿಸುವುದಿಲ್ಲ ಎಂದು ಒಬ್ಬ ವ್ಯಕ್ತಿ ಹೇಳುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಈ ವೀಡಿಯೋ ವೈರಲ್ ಆದ ಬಳಿಕ ಅಯೋಧ್ಯೆ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.


ಭಾರತೀಯ ದಂಡ ಸಂಹಿತೆಯ ಸೆಕ್ಷನ್ 147 (ಗಲಭೆ),323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಅವಮಾನ) ಅಡಿಯಲ್ಲಿ 10 ರಿಂದ 12 ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವೀಡಿಯೋ ಗಮನಕ್ಕೆ ಬಂದ ನಂತರ ನಾವು ಆರೋಪಿಗಳು ಹಾಗೂ ವ್ಯಕ್ತಿಯ ಗುರುತನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

Join Whatsapp