ಪಾಲಕ್ಕಾಡ್ ಪುರಸಭೆ ಕಟ್ಟಡದ ಮೇಲೆ ‘ಜೈಶ್ರೀರಾಮ್’ ಫ್ಲೆಕ್ಸ್ | ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸ್

Prasthutha|

ಪಾಲಕ್ಕಾಡ್ : ಇತ್ತೀಚೆಗೆ ನಡೆದ ಪಾಲಕ್ಕಾಡ್ ಪುರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪುರಸಭೆ ಕಟ್ಟಡ ಮೇಲೆ ‘ಜೈ ಶ್ರೀರಾಮ್’ ಮತ್ತು ‘ವಂದೇ ಮಾತರಂ’ ಎಂಬ ಘೋಷಣೆ ಇರುವ ಎರಡು ಬ್ಯಾನರ್ ಗಳನ್ನು ಹಾಕಿದ್ದ ಆರೋಪದ ಮೇರೆಗೆ ಕೆಲ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.

- Advertisement -

ಕೋಮು ಸೌಹಾರ್ಧತೆಯನ್ನು ಹಾಳು ಮಾಡುವ ಪ್ರಯತ್ನ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ಪುರಸಭೆ ಕಾರ್ಯದರ್ಶಿ ದೂರು ದಾಖಲಿಸಿದ್ದಾರೆ.

ಬುಧವಾರ ಸಂಜೆ ಪುರಸಭೆ ಎದುರು ವಿಯಜೋತ್ಸವ ನಡೆಸಿದ ಸಂದರ್ಭ ಪುರಸಭೆ ಕಟ್ಟಡದ ಮೇಲೆ ಮಲಯಾಳಂನಲ್ಲಿ ಬರೆದ ‘ಜೈ ಶ್ರೀರಾಮ್’ ಬರೆದ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಚಿತ್ರದ ಫ್ಲೆಕ್ಸ್ ಹಾಕಲಾಗಿದೆ. ಈ ವೇಳೆ ಕೆಲವು ಬಿಜೆಪಿ ಕಾರ್ಯಕರ್ತರಿರುವುದು ವೀಡಿಯೊವೊಂದರಲ್ಲಿ ಕಂಡು ಬಂದಿದೆ.

- Advertisement -

ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕ ಅಮಿತ್ ಶಾ ಫೋಟೊ ಇರುವ ಮತ್ತೊಂದು ಬ್ಯಾನರ್ ಸಹ ಅನಾವರಣಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಯ 52 ವಾರ್ಡ್ ಗಳ ಪೈಕಿ, ಬಿಜೆಪಿ 28ರಲ್ಲಿ ಗೆಲುವು ಸಾಧಿಸಿತ್ತು.

Join Whatsapp