►ಪಠ್ಯಪುಸ್ತಕ ಪರಿಷ್ಕರಣೆ ಕೆಲಸ ಮೇಲ್ವರ್ಗದವರಿಗೆ- ಚಡ್ಡಿ ಹೊರುವ ಕೆಲಸ ದಲಿತರಿಗೆ
ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ಕೆಲಸ ಮೇಲ್ವರ್ಗದವರಿಗೆ. ಚಡ್ಡಿ ಹೊರುವ ಕೆಲಸ ದಲಿತರಿಗೆ. ಇದು ಬಿಜೆಪಿಯ ಆಧುನಿಕ ಮನುಧರ್ಮ ಎಂದು ಕಾಂಗ್ರೆಸ್ ಮುಖಂಡ, ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದಲಿತರೊಬ್ಬರು RSSನವರು ಬಳಸಿ ಬಿಸಾಡಿದ ಚಡ್ಡಿ ಹೊತ್ತಿದ್ದು ಮಲ ಹೊರುವ ಪದ್ಧತಿಗಿಂತ ಭಿನ್ನವೇನಲ್ಲ.
ಅಣ್ಣಾ, ಅಂಬೇಡ್ಕರ್ರವರು ಶೋಷಿತರ ತಲೆಯ ಮೇಲೆ ಕಿರೀಟವನ್ನು ಕಾಣಬಯಸಿದ್ದರೇ ಹೊರತು ಚಡ್ಡಿಗಳನ್ನಲ್ಲ ಎಂದು ಛಲವಾದಿ ನಾರಾಯಣ ಸ್ವಾಮಿ ಅವರನ್ನು ಲೇವಡಿ ಮಾಡಿದರು.