ನೆರೆ ನೀರಿನಲ್ಲಿ ಹೊತ್ತುಕೊಂಡು ಹೋಗಿ ಶವ ಸಂಸ್ಕಾರ

Prasthutha|

ಕಟಪಾಡಿ:  ನಿರಂತರ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶವವನ್ನು ನೆರೆ ನೀರಿನಲ್ಲಿಯೇ ಹೊತ್ತುಕೊಂಡು ಹೋಗಿ ಶವ ಸಂಸ್ಕಾರ ನಡೆಸಿದ ಘಟನೆ ಕಾಪು ತಾಲೂಕು ಕೋಟೆ ಗ್ರಾ.ಪಂ. ವ್ಯಾಪ್ತಿಯ ಮಟ್ಟು ದೇವರಕುದ್ರುವಿನಲ್ಲಿ ನಡೆದಿದೆ.

- Advertisement -

ಸಂಪರ್ಕಕ್ಕೆ ರಸ್ತೆ ಇದ್ದರೂ, ತೋಟದಲ್ಲಿ ನೆರೆ ನೀರು ತುಂಬಿದ್ದರಿಂದ ಆ್ಯಂಬುಲೆನ್ಸ್ ಮನೆಯವರೆಗೆ ತಲುಪಲು ಸಾಧ್ಯವಾಗಿಲ್ಲ. ಹಾಗಾಗಿ ಮಟ್ಟು ದೇವರಕುದ್ರು ಬೊಮ್ಮನ್ ತೋಟದ ರಾಮಪ್ಪ ಕುಂದರ್ ಪತ್ನಿ ಬೇಬಿ ಪೂಜಾರಿ ಅವರ ಪಾರ್ಥಿವ ಶರೀರವನ್ನು ಸುಮಾರು ಅರ್ಧ ಕಿ.ಮೀ. ದೂರದವರೆಗೆ ಹೊತ್ತುಕೊಂಡು ಸಾಗಬೇಕಾಯಿತು.

ಆ ಬಳಿಕ ಆ್ಯಂಬುಲೆನ್ಸ್ ಮೂಲಕ ಸಾಗಿಸಿ ಕೋಟೆ ಗ್ರಾ.ಪಂ.ನ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಶವ ಸಂಸ್ಕಾರ ನಡೆಸಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.



Join Whatsapp