ಕಾರು ಡಿಕ್ಕಿ; ವೃದ್ಧ ದಂಪತಿ ಸಾವು

Prasthutha|

ಕುಂದಾಪುರ: ಕಾರು ಡಿಕ್ಕಿಯಾಗಿ ವೃದ್ಧ ದಂಪತಿ ಮೃತಪಟ್ಟ ಘಟನೆ ಕುಂದಾಪುರದ ವಿನಾಯಕ ಚಿತ್ರಮಂದಿರದ ಎದುರಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.

- Advertisement -


ಬ್ರಹ್ಮಾವರ ಹಾರಾಡಿ ಗ್ರಾಮದ ಹೊನ್ನಾಳ ನಿವಾಸಿಗಳಾದ ಮಹಾಬಲ ಶೆಟ್ಟಿ (68) ಹಾಗೂ ಅವರ ಪತ್ನಿ ಸರೋಜಾ ಶೆಡ್ತಿ (60) ಮೃತ ವ್ಯಕ್ತಿಗಳು.


ಕುಂದಾಪುರದಿಂದ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಕಾರು ದಂಪತಿಗೆ ಢಿಕ್ಕಿ ಹೊಡೆದಿದೆ.ಪ್ರಕರಣಕ್ಕ ಸಂಬಂಧಿಸಿ ಕಾರು ಚಾಲಕನ ವಿರುದ್ಧ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp