ಮರಕ್ಕೆ ಕಾರು ಡಿಕ್ಕಿ: ಇಬ್ಬರು ಯುವಕರು ಸಾವು

Prasthutha|

ಬೀದರ್: ಮದ್ಯಪಾನ ಮಾಡಿ ಚಲಾಯಿಸುತ್ತಿದ್ದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಇಬ್ಬರು ಮೃತಪಟ್ಟ ಘಟನೆ ನಗರದ ಹೊರ ವಲಯದ ದೇವ ಉದ್ಯಾನವನದ ಬಳಿ ನಡೆದಿದೆ.

- Advertisement -

ನಗರದ ಬುತ್ತಿ ಬಸವಣ್ಣ ಕಾಲೋನಿಯ ನಿವಾಸಿಗಳಾದ ವಿದ್ಯಾದರ್ (28) ಹಾಗೂ ಶಾಮ್ ರಾವ್ (30) ಸಾವನ್ನಪ್ಪಿದ ದುರ್ವೈವಿಗಳು.

ಇವರಿಬ್ಬರು ಪಾರ್ಟಿ ಮಾಡಿ ತೆಲಂಗಾಣದಿಂದ ಬೀದರ್ ಗೆ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಮಾರ್ಕೆಟ್ ಪೊಲೀಸರು  ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.



Join Whatsapp