ಕಲಬುರಗಿ: ಕಂಟೇನರ್’ಗೆ ಕಾರು ಡಿಕ್ಕಿಯಾದ ಪರಿಣಾಮ ದಂಪತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಬಳಿ ನಡೆದಿದೆ.
ವಿಜಯಪುರ ಸಿಪಿಐ ರವಿ ಉಕ್ಕುಂದ ಹಾಗೂ ಪತ್ನಿ ಮಧು ಮೃತರು ಎಂದು ತಿಳಿದು ಬಂದಿದೆ.
ರವಿ ಉಕ್ಕುಂದ ಹಾಗೂ ಮಧು ಅವರು ಸಿಂದಗಿಯಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ನಿಂತಿದ್ದ ಕಂಟೇನರ್’ಗೆ ಕಾರು ಡಿಕ್ಕಿ ಹೊಡೆದಿದೆ. ಹಿಂಬದಿಗೆ ಗುದ್ದಿದ್ದರಿಂದ ಕಾರಿನ ಅರ್ಧ ಭಾಗ ಕಂಟೇನರ್ ಒಳ ಹೊಕ್ಕಿದ್ದು, ಪತಿ, ಪತ್ನಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಬಗ್ಗೆ ನಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.