ಹೊಸದಿಲ್ಲಿ: ಇತಿಹಾಸವನ್ನು ಕೆಲವರು ತಮಗೆ ಬೇಕಾದದ್ದನ್ನು ಬರೆದರು. ಆದರೆ ಈಗ ನಾವು ಬರೆದ ಇತಿಹಾಸವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಹೊಸದಿಲ್ಲಿಯ ಎನ್ ಡಿಎಂಸಿ ಹಾಲ್ ನಲ್ಲಿ ಶುಕ್ರವಾರ “ಮಹಾರಾಣಾಸ್: ಎ ತೌಸಂಡ್ ಇಯರ್ ವಾರ್ ಫಾರ್ ಧರ್ಮ’ ಎಂಬ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತಿಹಾಸಗಳನ್ನು ಸರಕಾರಗಳಿಗೆ ಸೃಷ್ಟಿಸಲು ಆಗದು. ಏಕೆಂದರೆ ಅವುಗಳನ್ನು ಸತ್ಯ ಘಟನೆ ಆಧರಿಸಿ ಬರೆದಿರಲಾಗುತ್ತದೆ. ಭಾರತದ ಬಹುತೇಕ ಇತಿಹಾಸಕಾರರು ಪಾಂಡ್ಯರು, ಚೋಳರು, ಮೌರ್ಯರು, ಗುಪ್ತರು ಮತ್ತು ಅಹೋಮರ ಭವ್ಯ ಆಡಳಿತವನ್ನು ನಿರ್ಲಕ್ಷಿಸಿ, ಕೇವಲ ಮೊಘಲರಿಗಷ್ಟೇ ಆದ್ಯತೆ ನೀಡಿದ್ದರು. ಆಕ್ರಮಣಕಾರರ ವಿರುದ್ಧ ಭಾರತೀಯ ರಾಜರು ಮಾಡಿರುವಂಥ ಹಲವಾರು ಯುದ್ಧಗಳು, ಹೋರಾಟಗಳನ್ನು ಜನರು ಮರೆತೇ ಬಿಟ್ಟಿದ್ದಾರೆ ಎಂದರು.