PSI ನೇಮಕಾತಿ ಅಕ್ರಮ: ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ಅಭ್ಯರ್ಥಿಗಳು !

Prasthutha|

ಬೆಂಗಳೂರು: ರಾಜ್ಯ ಪಿಎಸ್ ಐ ಹುದ್ದೆಗಳ  ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರರಣಕ್ಕೆ ಸಂಬಂಧಿಸಿ ಕರ್ನಾಟಕ ಸರ್ಕಾರ ಮರು ಪರೀಕ್ಷೆ ನಡೆಸುವುದಾಗಿ ಮಹತ್ವದ ತೀರ್ಮಾನ ತೆಗದುಕೊಂಡಿದೆ. ಈ ತೀರ್ಮಾನವನ್ನು ವಿರೋಧಿಸಿ ನೊಂದ ಪಿಎಸ್ ಐ ಅಭ್ಯರ್ಥಿಗಳು ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ

- Advertisement -

ಎರಡು ಪುಟಗಳ ಪತ್ರ ಬರೆದು ನ್ಯಾಯ ಓದಗಿಸುವಂತೆ ಮನವಿ ಮಾಡಿದ್ದಾರೆ. ಆದರೆ ಈ ಪತ್ರ ಬರೆದವರು ಯಾರು ಎಂಬುದು ತಿಳಿದುಬಂದಿಲ್ಲ. ತಮ್ಮ ಹೆಸರನ್ನು ಪತ್ರದಲ್ಲಿ ನಮೂದಿಸಿಲ್ಲ. ಪಿಎಸ್ ಐ ಪರೀಕ್ಷೆಯಲ್ಲಿ ಆಯ್ಕೆಯಲ್ಲಿ ಮೋಸ ಹೊದವರಿಗೆ ನ್ಯಾಯ ಸಿಗಬೇಕು. ಅನ್ಯಾಯ ಮಾಡಿದವರನ್ನು ಜೈಲಿಗೆ ಹಾಕಿ. ಆದರೆ ಪ್ರಾಮಾಣಿಕವಾಗಿ ಬರೆದವರಿಗೆ ಮೋಸ ಆಗಬಾರದು. 2021ರಲ್ಲಿ ನಡೆದ ಎಫ್ ​ಡಿಎ ಪರೀಕ್ಷೆಯಲ್ಲಿ ಅಕ್ರಮವಾಗಿದೆ ಅದನ್ನು ಕೂಡ ತನಿಖೆ ಮಾಡಿ ನ್ಯಾಯ ಕೊಡಿಸಬೇಕು ಎಂದು ಬರೆದಿದ್ದಾರೆ.



Join Whatsapp