ಚಿಕ್ಕಮಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಸರ್ಕಾರವು ಮುಸ್ಲಿಂ ಸಮುದಾಯದವರ 4% ಮೀಸಲಾತಿ ರದ್ದು ಗೊಳಿಸಿರುವುದು ಅಪಾಯಕಾರಿ ಬೆಳವಣಿಗೆ ಎಂದು ಚಿಕ್ಕಮಗಳೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಲ್ ಹಾಜ್ ಮುಹಮ್ಮದ್ ಶಾಹಿದ್ ರಝ್ವಿ ಟೀಕಿಸಿದ್ದಾರೆ.
ಈ ಸಂಬಂಧ ಪ್ರತ್ರಿಕಾ ಹೇಳಿಕೆ ನೀಡಿರುವ ಅಧ್ಯಕ್ಷರು, ಈಗಾಗಲೇ ಮುಸ್ಲಿಂ ಸಮುದಾಯದವರು ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದವರಾಗಿದ್ದು ಇದನ್ನು ಗಮನದಲ್ಲಿಡದೆ ಈ ನಿರ್ಧಾರಕ್ಕೆ ಬಂದಿರುವುದು ಮುಸ್ಲಿಮರ ಹಕ್ಕು ಕಸಿದುಕೊಳ್ಳಲು ಮುಂದಾಗಿರುವುದು ದುರದೃಷಟಕರ ಬೆಳವಣಿಗೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಪ್ರಧಾನಮಂತ್ರಿಯವರ ಸಬ್ ಕಾ ಸಾತ್ ಸಬ್’ಕಾ ವಿಕಾಸ್ ಪ್ರಣಾಳಿಕೆಗೆ ಅರ್ಥವಿಲ್ಲದಂತಾಗಿದೆ. ತಕ್ಷಣಕ್ಕೆ ಮುಸ್ಲಿಮರ ಹಕ್ಕನ್ನು ಕಿತ್ತುಕೊಳ್ಳುವ ನಿರ್ಧಾರವನ್ನು ಕೈಬಿಡಬೇಕು. ಮೀಸಲಾತಿ ರದ್ದತಿಗೆ ಆದೇಶವನ್ನು ವಾಪಸ್ ಪಡೆಯುವ ಮೂಲಕ ಮುಸ್ಲಿಮರ ಭಾವನೆಗಳನ್ನು ಗೌರವಿಸಬೇಕು. ಶೈಕ್ಷಣಿಕವಾಗಿ ಔದ್ಯೋಗಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಮುಸ್ಲಿಮರು ಮುಂದೆ ಬರಲು ಕ್ರಮ ಕೈಗೊಳ್ಳಬೇಕು ಎಂದು ರಿಝ್ವಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಮುಸ್ಲಿಮರ 2B ಮೀಸಲಾತಿ ರದ್ದು ಅಪಾಯಕಾರಿ ಬೆಳವಣಿಗೆ: ಮುಹಮ್ಮದ್ ಶಾಹಿದ್ ರಝ್ವಿ
Prasthutha|