ಬ್ಯಾಂಕರ್ಸ್ ಬ್ಯಾಂಕ್ ಆಫ್ ದಿ ಇಯರ್ ಪ್ರಶಸ್ತಿ – 2022 ಗೆ ಕೆನರಾ ಬ್ಯಾಂಕ್ ಆಯ್ಕೆ

Prasthutha|

ಬೆಂಗಳೂರು:  2022ನೇ ಸಾಲಿನ ‘ಬ್ಯಾಂಕರ್ಸ್ ಬ್ಯಾಂಕ್ ಆಫ್ ದಿ ಇಯರ್ ಪ್ರಶಸ್ತಿ’ ಗೆ ಭಾರತದ ಪ್ರತಿಷ್ಠಿತ ಕೆನರಾ ಬ್ಯಾಂಕ್ ಆಯ್ಕೆಯಾಗಿದೆ.

- Advertisement -

ಲಂಡನ್ ನಲ್ಲಿ ನ.29ರಿಂದ ಡಿ.1ರ ವರೆಗೆ ಫೈನಾನ್ಷಿಯಲ್ ಟೈಮ್ಸ್ ಆಯೋಜಿಸಿದ್ದ ಗ್ಲೋಬಲ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಬ್ಯಾಂಕರ್ಸ್ ಬ್ಯಾಂಕ್ ಆಫ್ ದಿ ಇಯರ್ ಅವಾರ್ಡ್ ಗೆ ‘ಭಾರತದ ಕೆನರಾ ಬ್ಯಾಂಕ್’ ಆಯ್ಕೆಯಾಗಿದೆ.

2022ರ ಡಿಸೆಂಬರ್ 1ರಂದು ಲಂಡನ್ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು. ಕೆನರಾ ಬ್ಯಾಂಕ್ ನ ಎಂಡಿ, ಸಿಇಒ ಎಲ್.ವಿ. ಪ್ರಭಾಕರ್ ಅವರು ಸಂಸ್ಥೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

- Advertisement -

ದಿ ಬ್ಯಾಂಕ್ ಆಫ್ ದಿ ಇಯರ್ ಪ್ರಶಸ್ತಿಗಳು ಬ್ಯಾಂಕಿಂಗ್ ಕ್ಷೇತ್ರಕ್ಕೆ ಆಸ್ಕರ್ ಪ್ರಶಸ್ತಿಗಳಿದ್ದಂತೆ. ಕೆನರಾ ಬ್ಯಾಂಕ್ ಭಾರತದ ಅತ್ಯುತ್ತಮ ಬ್ಯಾಂಕ್ ಎಂದು ಗುರುತಿಸಲ್ಪಟ್ಟಿದೆ. ಈ ಪ್ರಶಸ್ತಿಯನ್ನು ತನ್ನ ಎಲ್ಲ ಗ್ರಾಹಕರು, ಹೂಡಿಕೆದಾರರು, ಸಿಬ್ಬಂದಿ ಮತ್ತು ಷೇರುದಾರರಿಗೆ ಅರ್ಪಿಸುವುದಾಗಿ ಕೆನರಾ ಬ್ಯಾಂಕ್ ತಿಳಿಸಿದೆ.

Join Whatsapp