ರಾಜೀನಾಮೆಗೆ ಒತ್ತಾಯಿಸಿದ ಸಂಸದರ ಅಭಿಪ್ರಾಯ ತಿರಸ್ಕರಿಸಿದ ಕೆನಡಾ ಪ್ರಧಾನಿ

Prasthutha|

ಟೊರೆಂಟೊ: ಆಡಳಿತಾರೂಢ ಸಂಸದರ ರಾಜೀನಾಮೆ ಒತ್ತಾಯವನ್ನು ತಿರಸ್ಕರಿಸಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮುಂಬರುವ ಚುನಾವಣೆಯಲ್ಲೂ 4ನೇ ಬಾರಿಗೆ ಪಕ್ಷವನ್ನು ಮುನ್ನಡೆಸಲು ನಿರ್ಧರಿಸಿದ್ದಾರೆ.

- Advertisement -


ಲಿಬರಲ್ ಪಕ್ಷದ ಸಂಸದರ ಜೊತೆ 3 ಗಂಟೆಗಳ ಕಾಲ ಮಾತುಕತೆ ನಡೆಸಿದ ಟ್ರುಡೊ ಅವರಿಗೆ ಮುಂದಿನ ಚುನಾವಣೆಗೂ ಮುನ್ನ ತಾವು ರಾಜೀನಾಮೆ ನೀಡಬೇಕೆಂದು 20ಕ್ಕೂ ಅಧಿಕ ಸಂಸದರು ಪತ್ರಕ್ಕೆ ಸಹಿ ಹಾಕಿರುವುದು ಗಮನಕ್ಕೆ ಬಂದಿದೆ.


ಮುಂದೆ ಪಕ್ಷವನ್ನು ಉತ್ತಮ ಮಾರ್ಗದಲ್ಲಿ ಮುನ್ನಡೆಸುವ ಕುರಿತು ದೃಢವಾದ ಮಾತುಗಳು ಕೇಳಿಬರುತ್ತಿವೆ. ಆದರೆ, ಮುಂದಿನ ಚುನಾವಣೆಗೆ ಹೋಗುವ ನಾಯಕನಾಗಿ ಅದು ನನ್ನಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ

- Advertisement -


ಈ ನಡುವೆ, ಹೌಸ್ ಆಫ್ ಕಾಮನ್ಸ್ ನ ಲಿಬರಲ್ ಪಕ್ಷದ 153 ಸದಸ್ಯರ ಬೆಂಬಲ ಟ್ರುಡೊ ಅವರಿಗೆ ಇದೆ ಎಂದು ಸಂಪುಟ ಸದಸ್ಯರು ಹೇಳಿದ್ದಾರೆ.



Join Whatsapp