ಸರ್ರೆ: ಕೆನಡಾದ ಕಬಡ್ಡಿ ಫೆಡರೇಶನ್ ಅಧ್ಯಕ್ಷ ಕಮಲಜಿತ್ ಸಿಂಗ್ ಕಾಂಗ್ (ನೀತು ಕಾಂಗ್) ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆದಿದ್ದು, ಘಟನೆಯ ಭಯಾನಕ ವೀಡಿಯೋ ವೈರಲಾಗಿದೆ.
ಕೆನಡಾದ ಸರ್ರೆಯ ಬೇರ್ ಕ್ರೀಕ್ ಪ್ರದೇಶದಲ್ಲಿರುವ ನಿವಾಸದಿಂದ ಹೊರಗೆ ಬಂದ ತಕ್ಷಣ ಕಾಂಗ್ ಮೇಲೆ ದಾಳಿ ಮಾಡಲಾಗಿದೆ. ದುಷ್ಕರ್ಮಿಗಳು ಮೊದಲು ಕಮಲಜಿತ್ ಕಾಂಗ್ ಗಾಗಿ ಅವರ ನಿವಾಸದ ಹೊರಗೆ ಕಾಯುತ್ತಿದ್ದರು. ಕಾಂಗ್ ಮನೆಯಿಂದ ಹೊರಬಂದ ತಕ್ಷಣ ಅವರ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಕಮಲಜಿತ್ ಕಾಂಗ್‌ಗೆ 2 ಗುಂಡುಗಳು ತಗುಲಿದ್ದು, ಒಂದು ಹೊಟ್ಟೆ ಭಾಗಕ್ಕೆ ತಗುಲಿದರೆ, ಮತ್ತೊಂದು ಗುಂಡು ಕಾಲಿಗೆ ತಗುಲಿದೆ ಎಂದು ತಿಳಿದು ಬಂದಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಳೆದ 20 ವರ್ಷಗಳಿಂದ ಕೆನಡಾದಲ್ಲಿ ನೆಲೆಸಿರುವ ಕಾಂಗ್ ಮೂಲತಃ ಜಲಂಧರ್‌ನ ಉಗ್ಗಿ ಗ್ರಾಮದವರಾಗಿದ್ದಾರೆ.