ಒಟ್ಟಾವ: ಕೆನಡಾದ ಬ್ರಾಂಪ್ಟನ್ ನಲ್ಲಿನ ಭಗವದ್ಗೀತೆ ಉದ್ಯಾನಕ್ಕೆ ಹಾಕಿದ್ದ ಬೋರ್ಡನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಬೋರ್ಡ್ ಅನ್ನು ರಿಪೇರಿ ಮಾಡಿ ಮತ್ತೆ ಇರಿಸಿರುವುದಾಗಿ ನಗರದ ಮೇಯರ್ ಹೇಳಿದ್ದಾರೆ.
ಹಿಂದೆ ಟ್ರಾಯರ್ಸ್ ಪಾರ್ಕ್ ಎಂದಿದ್ದ ಈ ಉದ್ಯಾನದ ಹೆಸರನ್ನು ಭಗವದ್ಗೀತೆ ಎಂದು ಬದಲಿಸಲಾಗಿತ್ತು. ಇದನ್ನು ಕೆಲವರು ವಿರೋಧಿಸಿದ್ದರು.
ಬೋರ್ಡ್ ಒಡೆದು, ಗಿಡ ನಾಶ ಮಾಡಿರುವುದನ್ನು ಸಾಮಾಜಿಕ ದ್ವೇಷ ನಡೆ ಎಂದು ಕೆನಡಾದಲ್ಲಿನ ಭಾರತೀಯ ರಾಯಭಾರ ಕಚೇರಿಯು ಘಟನೆಯನ್ನು ಖಂಡಿಸಿದೆ. ಕೆಲವರು ಭಾರತದಲ್ಲಿ ನಡೆಯುತ್ತಿರುವುದು ಯಾವ ಬಗೆಯ ದ್ವೇಷದ ರಾಜಕೀಯ ಎಂದು ಪ್ರಶ್ನಿಸುತ್ತಿರುವುದಾಗಿ ವರದಿಯಾಗಿದೆ.
ಕೆನಡಾದಲ್ಲಿ ಭಾರತದ ಸಿಖ್ ಜನಾಂಗೀಯರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಅದಾದ ಬಳಿಕ ಆಂಗ್ಲೋ ಇಂಡಿಯನ್ಸ್ ಹೋಗಿ ಸೇರಿದ್ದಾರೆ. ಇತ್ತೀಚೆಗೆ ಭಾರತದ ಹಿಂದೂಗಳು ಬಹು ಸಂಖ್ಯೆಯಲ್ಲಿ ಕೆನಡಾದ ಖಾಯಂ ನಿವಾಸಿಗಳಾಗುತ್ತಿದ್ದಾರೆ.