ಸರಕಾರಿ ಕಚೇರಿಗಳಲ್ಲಿ ವೀಡಿಯೋ ಮಾಡಬಹುದೇ? – ಮತ್ತೆ ಬಂತು ಹೊಸ ಆದೇಶ

Prasthutha|

►ಜನಾಕ್ರೋಶಕ್ಕೆ ಬೆದರಿ, ಬೆಳಗ್ಗೆ ಹೊರಡಿಸಿದ ಆದೇಶ ಸಂಜೆ ಹಿಂಪಡೆದ ಸರಕಾರ

- Advertisement -

ಬೆಂಗಳೂರು: ಸರಕಾರಿ ಕಚೇರಿಗಳಲ್ಲಿ ಕಚೇರಿ ಅವಧಿಯಲ್ಲಿ ಖಾಸಗಿ ವ್ಯಕ್ತಿಗಳು ವೀಡಿಯೋ ಮಾಡುವಂತಿಲ್ಲ ಎಂಬ‌ ಆದೇಶವನ್ನು ಸರಕಾರ ಜನಾಕ್ರೋಶಕ್ಕೆ ಬೆದರಿ ಹಿಂಪಡೆದಿದೆ.

ಜಿಲ್ಲೆ, ತಾಲೂಕು ಮತ್ತು ರಾಜ್ಯಮಟ್ಟದ ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಕಚೇರಿಯೊಳಗೆ ವೀಡಿಯೋ ಮಾಡುವುದರಿಂದ ಮಹಿಳಾ ಉದ್ಯೋಗಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕಾಗಿ ವೀಡಿಯೋ ಮಾಡುವುದು ನಿಷೇಧಿಸಿ ಸರಕಾರ ಆದೇಶ ಹೊರಡಿಸಿತ್ತು.

- Advertisement -

ಆದರೆ ಈ ಬಗ್ಗೆ ಜನರಿಂದ ತೀವ್ರ ವಿರೋಧ‌ ವ್ಯಕ್ತ ವಾಗಿದ್ದು ಸರಕಾರದ ಈ ಕ್ರಮದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ಇದೀಗ ಈ ಆದೇಶವನ್ನು ಸರಕಾರ ನಿನ್ನೆಯೇ ಹಿಂಪಡೆದಿದೆ.



Join Whatsapp