ವಿಟ್ಲ ಕ್ಯಾಂಪಸ್ ಫ್ರಂಟ್ ನಿಂದ ಸದಸ್ಯತ್ವ ಅಭಿಯಾನ

Prasthutha|

ವಿಟ್ಲ : ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಸದಸ್ಯತ್ವ ಅಭಿಯಾನವು ರಾಜ್ಯಾದ್ಯಂತ ” ಒಗ್ಗಟ್ಟಿನಲ್ಲಿ ಬಲವರ್ಧನೆ , ಭಿನ್ನ ಧ್ವನಿಯ ರಕ್ಷಣೆ” ಎಂಬ ಘೋಷಾ ವಾಕ್ಯದಡಿ ಪ್ರಾರಂಭವಾಗಿದ್ದು, ಇದರ ಭಾಗವಾಗಿ ವಿಟ್ಲ ಜಿಲ್ಲಾ ಸದಸ್ಯತ್ವ ಅಭಿಯಾನಕ್ಕೆ ಕಲ್ಲಡ್ಕದಲ್ಲಿ ಚಾಲನೆ ನೀಡಲಾಯಿತು. ವಿಟ್ಲ ಜಿಲ್ಲಾ ಅಧ್ಯಕ್ಷರಾದ ಫಯಾಜ್ ಕಲ್ಲಡ್ಕ ಸದಸ್ಯತ್ವ ಕೂಪನ್ ವಿದ್ಯಾರ್ಥಿಗಳಿಗೆ ನೀಡುವ ಮುಖಾಂತರ ಚಾಲನೆ ನೀಡಿದರು.

- Advertisement -

ಈ ಸಂದರ್ಭದಲ್ಲಿ ವಿಟ್ಲ ಜಿಲ್ಲಾ ಕಾರ್ಯದರ್ಶಿ ಸಜ್ಜಾದ್ ಮೆಲ್ಕರ್, ಜಿಲ್ಲಾ ಸಮಿತಿ ಸದಸ್ಯರಾದ ಅನ್ವರ್ ಆಲಂಪಾಡಿ, ಸುಹೈಲ್ ಯೂಸುಫ್ ಕಲ್ಲಡ್ಕ, ಕಲ್ಲಡ್ಕ ಏರಿಯಾ ಅಧ್ಯಕ್ಷರಾದ ಹಕಮ್ , ಕಾರ್ಯದರ್ಶಿ ಉಮರ್ ಮುಕ್ತಾರ್ ಮತ್ತು ಸದಸ್ಯರಾದ ನಿಹಾಲ್ ಮತ್ತು ಶಾನಿದ್ ಮತ್ತಿತರರು ಉಪಸ್ಥಿತರಿದ್ದರು.

Join Whatsapp