ನೀಟ್ ವಿದ್ಯಾರ್ಥಿನಿಯ ಒಳ ಉಡುಪು ಕಳಚಿಸಿದ ಕೃತ್ಯ ಖಂಡಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ; ಜಲಫಿರಂಗಿ ಪ್ರಯೋಗ

Prasthutha|

ತಿರುವನಂತಪುರ: ನೀಟ್ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯ ಒಳ ಉಡುಪು ಕಳಚಿಸಿದ ಕೃತ್ಯವನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವಿದ್ಯಾರ್ಥಿಗಳು ಮಂಗಳವಾರ ತಿರುವನಂತಪುರದ ಎ.ಜಿ.ಕಚೇರಿಗೆ ಜಾಥಾ ನಡೆಸಿ ಅಧಿಕಾರಿಗಳ ಕೃತ್ಯವನ್ನು ಖಂಡಿಸಿದರು.

- Advertisement -

ನೂರಾರು ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳು ಎ.ಜಿ.ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಬಳಸಿದರು.



Join Whatsapp