ಅವೈಜ್ಞಾನಿಕ ಪಠ್ಯಪರಿಷ್ಕರಣೆ ವಿರುದ್ಧದ ಹೋರಾಟಕ್ಕೆ ಕ್ಯಾಂಪಸ್ ಫ್ರಂಟ್ ಸಂಪೂರ್ಣ ಬೆಂಬಲ: ಅಥಾವುಲ್ಲ ಪುಂಜಾಲಕಟ್ಟೆ

Prasthutha|

ಬೆಂಗಳೂರು: ಅವೈಜ್ಞಾನಿಕ ಮತ್ತು  ಅಸಂವಿಧಾನಿಕವಾಗಿ ಹತ್ತನೇ ತರಗತಿಯ ಪಠ್ಯಪರಿಷ್ಕರಣೆ ವಿರೋಧಿಸಿ ಹಾಗೂ ಕುವೆಂಪುರವರಿಗೆ ಅವಮಾನಗೈದ ಪಠ್ಯಪರಿಷ್ಕರಣಾ ಸಮಿತಿಯ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ವಿರುದ್ಧ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿಯು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆಯೋಜಿಸಿರುವ ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿಯು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ತಿಳಿಸಿದ್ದಾರೆ.

- Advertisement -

  ಕನ್ನಡಿಗರನ್ನು ಅವಮಾನಿಸಿ ಅನೇಕ ಸಾಹಿತಿಗಳ ಪಠ್ಯಗಳನ್ನು ಕೈಬಿಟ್ಟು, ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ಮರೆಮಾಚಿ , ದೇಶದ್ರೋಹಿ ಹೆಡ್ಗೇವಾರ್ ಭಾಷಣವನ್ನು ಸೇರ್ಪಡೆಗೊಳಿಸುವ ಮುಖಾಂತರ ಶಿಕ್ಷಣದ ಕೇಸರೀಕರಣಕ್ಕೆ ಮುಂದಾದ ರಾಜ್ಯ ಸರ್ಕಾರದ ಈ ತೀರ್ಮಾನವನ್ನು ರಾಜ್ಯದ ವಿದ್ಯಾರ್ಥಿ ಸಮುದಾಯವು ಖಂಡಿಸಲೇಬೇಕು, ಆದ್ದರಿಂದ ಜೂನ್ 18 ರಂದು ಬೆಂಗಳೂರಿನಲ್ಲಿ ನಡೆಯುವ ಈ ಒಂದು ಹೋರಾಟಕ್ಕೆ ಎಲ್ಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅಥಾವುಲ್ಲ ಪುಂಜಾಲಕಟ್ಟೆ ಕರೆ ನೀಡಿದ್ದಾರೆ.

Join Whatsapp