ಮಣಿಪುರ-ಹರಿಯಾಣದಲ್ಲಿ ಮುಂದುವರಿದಿರುವ ಹಿಂದುತ್ವ ಭಯೋತ್ಪಾದಕರ ದಾಳಿ ನಿಲ್ಲಿಸಲು ಭಾರತ ಬಂದ್‌ಗೆ ಕರೆ ನೀಡಿ: ಪ್ರತಿಪಕ್ಷಗಳಿಗೆ TUCI ಮನವಿ

Prasthutha|

ಬೆಂಗಳೂರು: ಮಣಿಪುರ ಹಾಗೂ ಹರಿಯಾಣದಲ್ಲಿ ಮುಂದುವರಿದಿರುವ ಹಿಂದುತ್ವ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ದ ನಾಯಕರು ಭಾರತ ಬಂದ್ ಗೆ ಕರೆ ನೀಡಬೇಕೆಂದು ಪ್ರತಿಪಕ್ಷಗಳಿಗೆ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ(TUCI) ಮನವಿ ಮಾಡಿದೆ.

- Advertisement -

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ TUCI ರಾಜ್ಯಾಧ್ಯಕ್ಷರಾದ ಆರ್.ಮಾನಸಯ್ಯ, ಸಂಘಪರಿವಾರ ಪ್ರಾಯೋಜಿತ ಭಯೋತ್ಪಾದಕ ದಾಳಿಯಲ್ಲಿ ಮಣಿಪುರ ರಾಜ್ಯ ಸಂಪೂರ್ಣ ಹಿಂಸಾಕಾಂಡಕ್ಕೆ ಗುರಿಯಾಗಿದೆ. ಮಣಿಪುರದ ಪೋಲಿಸ್ ಸಂಪೂರ್ಣ ಭಯೊತ್ಪದಕರ ನಿಯಂತ್ರಣಕ್ಕೆ ಹೋಗಿದೆ. ಸರ್ವೋಚ್ಛ ನ್ಯಾಯಾಲಯ ಮಧ್ಯ ಪ್ರವೇಶಿಸಿದ ನಂತರವೂ ಮೈತಿ ಪುಂಡರ ಪಡೆ ತನ್ನ ಅಟ್ಟಹಾಸ ಮುಂದುವರೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರ ಬೆನ್ನಲ್ಲೆ ಹರಿಯಾಣದಲ್ಲಿ ಹಿಂದೂ ಶೋಭಾಯಾತ್ರೆಯ ಮೂಲಕ ಸಶಸ್ತ್ರ ದಾಳಿ ಮುಂದುವರೆದಿದೆ. ಅಂಜುಮನ್ ಮಸೀದಿಗೆ ಬೆಂಕಿ ಹಚ್ಚಿ, ಧರ್ಮ ಗುರು ಸಾದ್ ಎನ್ನುವವರನ್ನು ಕೊಂದು ಹಾಕಲಾಗಿದೆ. ಈ ಭಯೋತ್ಪದಕ ದಾಳಿಯನ್ನು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

- Advertisement -

  ಹಾಗೆಯೆ, ಮಣಿಪುರ ಹಾಗೂ ಹರಿಯಾಣದಲ್ಲಿ ಮುಂದುವರೆದಿರುವ ಈ ದಾಳಿಯನ್ನು ಖಂಡಿಸಿ ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ದ ನಾಯಕರು ಭಾರತ ಬಂದ್ ಗೆ ಕರೆ ನೀಡ ಬೇಕೆಂದು ಪ್ರತಿಪಕ್ಷಗಳಿಗೆ ಅವರು ಮನವಿ ಮಾಡಿದ್ದಾರೆ.

   ಅತ್ತ ಕಾರ್ಮಿಕ ಹಾಗೂ ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಿದವರೆ, ಇತ್ತ ಮಣಿಪುರ ಹರಿಯಾಣದಲ್ಲಿ ಜನರ ನರಮೇಧ ನಡೆಸುತ್ತಿದ್ದಾರೆ. ಹಾಗಾಗಿ ಕಾರ್ಮಿಕ  ಹಾಗೂ ರೈತ ಸಂಘಟನೆಗಳು ಪ್ರಭುತ್ವ ಪ್ರಾಯೋಜಿತ  ಈ ಘೋಷಿತ ಭಯೋತ್ಪಾದನೆಯ ವಿರುದ್ದ ವ್ಯಾಪಕವಾಗಿ ಪ್ರತಿಭಟಿಸಬೇಕೆಂದು ಅವರು ಕೇಳಿಕೊಂಡಿದ್ದಾರೆ.

Join Whatsapp