ಟಾರ್ಚ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ: ತಾಯಿ, ಮಗು ಮೃತ್ಯು

Prasthutha|

ಮುಂಬೈ: ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಟಾರ್ಚ್ ಲೈಟ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ ಮಾಡುವಾಗ ಗರ್ಭಿಣಿ ಹಾಗೂ ಆಕೆಯ ಮಗು ಹೊಟ್ಟೆಯಲ್ಲಿಯೇ ಮೃತಪಟ್ಟಿರುವ ಅಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.

- Advertisement -


ಹೆರಿಗೆಗೆ ದಾಖಲಾಗಿದ್ದ ಕೌಸರುದ್ದೀನ್ ಅನ್ಸಾರಿ ಅವರ ಪತ್ನಿ ಸಾಹಿದುನ್ ಅವರೇ ಮೃತರಾದವರು. ಮುಂಬೈ ಮಹಾನಗರ ಪಾಲಿಕೆಯ ಸುಸ್ಮಾ ಸ್ವರಾಜ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗುರುವಾರ ಈ ಘಟನೆ ನಡೆದಿದೆ.

ಸಾಹಿದುನ್ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ನಂತರ ವೈದ್ಯರು ಸಾಮಾನ್ಯ ಹೆರಿಗೆ ಮಾಡಿಸುವುದಾಗಿ ಹೇಳಿದ್ದರು. ಆದರೆ ಗುರುವಾರ ಸಂಜೆವರೆಗೂ ಕಾದು ಸಿಸರಿಯನ್ ಹೆರಿಗೆ ಮಾಡಿಸಲು ಮುಂದಾಗಿದ್ದರು. ಆದರೆ ಈ ವೇಳೆ ವಿದ್ಯುತ್ ಕೈಕೊಟ್ಟಿತ್ತು. ಟಾರ್ಚ್ ಲೈಟ್ ಬೆಳಕಲ್ಲಿಯೇ ಸಿಸೇರಿಯನ್ ಮಾಡುತ್ತಿದ್ದರು. ಇದರಿಂದ ನನ್ನ ಪತ್ನಿ ಮಗು ಮೃತಪಟ್ಟಿದೆ ಎಂದು ಅನ್ಸಾರಿ ಆರೋಪಿಸಿದ್ದಾರೆ.



Join Whatsapp