ಮತಾಂತರ ನಿಷೇಧ ಕಾಯ್ದೆ ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಲು ಸಚಿವ ಸಂಪುಟ ಒಪ್ಪಿಗೆ

Prasthutha|

ಬೆಂಗಳೂರು: ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

- Advertisement -


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರರಿಗೆ ವಿವರ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಬಿಬಿಎಂಪಿ ‌ಚುನಾವಣೆ ನಡೆಸುವ ವಿಚಾರಕ್ಕೆ ಸಂಬಂಧಿಸಿ ಮಾಹಿತಿ ನೀಡಿದ ಮಾಧುಸ್ವಾಮಿ, ಸಂಪುಟ ಸಭೆಯಲ್ಲಿ ಇದರ ಚರ್ಚೆಯಾಗಲಿಲ್ಲ, ಬೆಳಗ್ಗೆ ಇದರ ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ, ಸಿಎಂ,ಕಾನೂನು ತಜ್ಙರ ಜೊತೆ ಚರ್ಚಿಸಿದ್ದೇವೆ, ಮೀಸಲಾತಿ ಇಲ್ಲದೆ ಚುನಾವಣೆ ನಡೆಸುವುದಿಲ್ಲ, ಒಬಿಸಿಯವರಿಗೆ ಮೀಸಲಾತಿ ನೀಡಬೇಕು. ಎಂಪಿ,ಮಹಾರಾಷ್ಟ್ರದ ಕೇಸ್ ಗೆ ಸಂಬಂಧಿಸಿ ಸುಪ್ರೀಂ ಆದೇಶ ಮಾಡಿದೆ ಎಂದರು.

- Advertisement -

ರಾಜ್ಯದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿದ್ದು, 51 ಪಂಚಾಯ್ತಿಗಳು ಟೌನ್ ವ್ಯಾಪ್ತಿಗೆ ಸೇರಿವೆ, ಈಗ ಗ್ರಾಮ ಪಂಚಾಯ್ತಿ‌ ಚುನಾವಣೆ ಮುಗಿದುಹೋಗಿದೆ. ಬೆಂಗಳೂರಿಗೆ 110 ಹಳ್ಳಿಗಳನ್ನು ಸೇರಿಸಿದ್ದೇವೆ ಎಂದು ಹೇಳಿದರು. ಈಗ ಟೌನ್ ನಡಿ ಚುನಾವಣೆ ನಡೆಸಲಾಗಲ್ಲ, ಹೊಸ ತಾಲೂಕುಗಳನ್ನೂ ನಾವು ಮಾಡಿದ್ದೇವೆ. 11 ಸಾವಿರಕ್ಕೊಬ್ಬ ಸದಸ್ಯರಿರಬೇಕು, ಅದಕ್ಕಿಂತ ಕಡಿಮೆ ಜನರಿಗೆ ಸದಸ್ಯರಿರಬಾರದೆನ್ನಲಾಗಿದೆ ಹಾಗಾಗಿ ಡಿಲಿಮಿಟೇಶನ್ ಕಮೀಷನ್ ಮಾಡಬೇಕು. ಜನಸಂಖ್ಯೆ ಆಧಾರದ ಮೇಲೆ ನಾವು ಮಾಡ್ತಿದ್ದೇವೆ, ನಮಗೆ ಮೂರ್ನಾಲ್ಕು ತಿಂಗಳು ಸಮಯಾವಕಾಶಬೇಕು ಎಂದು ಸುಪ್ರೀಂಗೆ ಅಫೀಲು ಹೋಗಲು ನಿರ್ಧರಿಸಿದ್ದೇವೆ ಎಂದರು.

ಸರ್ಕಾರದ ಮುಖ್ಯಕಾರ್ಯದರ್ಶಿಗಳ ನೇಮಕ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಯಾರನ್ನು ನೇಮಕಮಾಡಬೇಕೆಂದು ಸಿಎಂ ವಿವೇಚನೆಗೆ ಬಿಡಲಾಗಿದೆ. ಸಿಎಸ್ ಸ್ಥಾನಕ್ಕೆ 9 ಮಂದಿ ಆಕಾಂಕ್ಷಿಗಳಿದ್ದಾರೆ, ಇವರಲ್ಲಿ ಯಾರನ್ನು ನೇಮಿಸಬೇಕು ಎಂದು ಸಿಎಂ ನಿರ್ಧರಿಸುತ್ತಾರೆ ಎಂದರು.

ಹಿಮೋಪೊಲಿಯೋ ಕಾಯಿಲೆಗೆ  ರಾಜ್ಯದಲ್ಲಿ ಉಚಿತ ಔಷಧಿ ನೀಡಲು ನಿರ್ಧರಿಸಲಾಗಿದೆ. ಪ್ರಸ್ತುತ ಔಷಧಿಗೆ ದುಬಾರಿ ವೆಚ್ಚವಾಗಲಿದೆ, ರಾಜ್ಯದಲ್ಲಿ ನಾಲ್ಕೈದು ಸಾವಿರ ರೋಗಿಗಳಿದ್ದಾರೆ. ಇವರಿಗೆ ಉಚಿತ ಔಷಧಿ ನೀಡಲು ನಿರ್ಧರಿಸಲಾಗಿದೆ ಎಂದರು. ಅಲ್ಲದೇ ತಲಸೇಮಿಯಾ ಕಾಯಿಲೆಗೂ ಉಚಿತ ಔಷಧಿ ನೀಡಲು ಒಪ್ಪಿಗೆ ಲಭಿಸಿದ್ದು, 15 ಕೋಟಿ ರೂ. ಗಳನ್ನು ಇದಕ್ಕೆ ನೀಡಲಾಗಿದೆ ಎಂದರು.

Join Whatsapp