ಕೊಲ್ಕತಾ : ಕೊರೊನ ವೈರಸ್ ಲಸಿಕೆ ನೀಡಲು ಆರಂಭವಾದ ಬಳಿಕ, ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ನಿಯಮಗಳ ಬಗ್ಗೆ ಚಿಂತಿಸಲಾಗುತ್ತದೆ ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷದ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದ ಅವರು ಈ ವಿಷಯ ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ ನಿಯಮಗಳನ್ನು ಇನ್ನೂ ರೂಪಿಸಲಾಗಿಲ್ಲ. ಕೊರೊನ ಸೋಂಕಿನ ಈ ಸಂದರ್ಭ ಅಂತಹ ದೊಡ್ಡ ಪ್ರಕ್ರಿಯೆಯನ್ನು ನಿರ್ವಹಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.
“ಸಿಎಎ ನಿಯಮಗಳನ್ನು ಇನ್ನಷ್ಟೇ ಸಿದ್ಧಪಡಿಸಬೇಕಾಗಿದೆ. ಕೊರೊನ ಇರುವುದರಿಂದ ಅಂತಹ ದೊಡ್ಡ ಪ್ರಕ್ರಿಯೆ ನಿರ್ವಹಿಸಲು ಸಾಧ್ಯವಾಗಿಲ್ಲ. ಕೊರೊನ ಲಸಿಕೆ ಆರಂಭವಾದ ಬಳಿಕ ಮತ್ತು ಕೊರೊನ ಚಕ್ರ ಮುರಿದ ಬಳಿಕ, ನಾವು ಅದರ ಬಗ್ಗೆ ವಿಚಾರಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ.