ಸಿ.ಬಿ.ಎಸ್.ಇ. ಫಲಿತಾಂಶ: ಬರಕಾ ಇಂಟರ್ನ್ಯಾಷನಲ್ ಸ್ಕೂಲ್ ಗೆ ಸತತ 100% ಸಾಧನೆ

Prasthutha|

ಇತ್ತೀಚೆಗೆ ಪ್ರಕಟಗೊಂಡ ಸಿ.ಬಿ.ಎಸ್.ಇ. 10ನೇ ಹಾಗೂ 12ನೇ ವಾರ್ಷಿಕ ಫಲಿತಾಂಶದಲ್ಲಿ ಮಂಗಳೂರು ಅಡ್ಯಾರಿನ ಬರಕಾ ಇಂಟರ್ನ್ಯಾಷನಲ್ ಸ್ಕೂಲ್ ಸತತ ಮೂರನೇ ವರ್ಷ 100% ಫಲಿತಾಂಶ ಸಾಧಿಸಿದೆ.

- Advertisement -


ಹತ್ತನೇ ತರಗತಿಯಲ್ಲಿ ಹಾಜರಾದ ವಿದ್ಯಾರ್ಥಿಗಳಲ್ಲಿ 18 ವಿಶಿಷ್ಟ ಶ್ರೇಣಿ, 27 ಪ್ರಥಮ ಶ್ರೇಣಿ ಹಾಗೂ 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

12ನೇ ತರಗತಿಯಲ್ಲಿ 04 ವಿಶಿಷ್ಟ ಶ್ರೇಣಿ, 10 ಪ್ರಥಮ ಶ್ರೇಣಿ ಹಾಗೂ 1 ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

- Advertisement -

ಈ ವಿದ್ಯಾರ್ಥಿಗಳಲ್ಲಿ 5 ಹಾಫಿಝಾ ಹಾಗೂ ಓರ್ವ ಹಾಫಿಝ್ ವಿದ್ಯಾರ್ಥಿಯೂ ಸೇರಿರುತ್ತಾರೆ ಎನ್ನುವುದು ವಿಶೇಷ.

ತೇರ್ಗಡೆಗೊಂಡ ಎಲ್ಲಾ ವಿದ್ಯಾರ್ಥಿಗಳನ್ನು ಶಾಲೆಯ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಅಭಿನಂದಿಸಿದೆ.

Join Whatsapp